ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಮಿಷನ್ ಅಡ್ಮಿಷನ್

Last Updated 4 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಎರಡನೇ ಪಿಯುಸಿ ನಂತರ ಮುಂದೇನಪ್ಪಾ ಎಂದು ಪರೀಕ್ಷೆಯ ನಂತರ ತಲೆಕೆಡಿಸಿಕೊಂಡರೆ ಹೆಚ್ಚು ಪ್ರಯೋಜನವಿಲ್ಲ.ಗುರಿಯಿರಿಸಿಕೊಂಡು ಸಾಗುವವರಿಗೆ ಮುಂದಿನ ದಾರಿ ನಿಚ್ಚಳ. ಅದು ಎಷ್ಟು ಕಠಿಣವಾಗಿರುತ್ತದೆ, ಎಂತಹ ಸಾಮರ್ಥ್ಯ ಬೇಡುತ್ತದೆ, ನಿಭಾಯಿಸಲು ತನ್ನಿಂದ ಸಾದ್ಯವೇ ಎಂಬಂತಹ ಯೋಚನೆಗಳೆಲ್ಲ ಮೊದಲೇ ಸ್ಪಷ್ಟವಾಗಿದ್ದರೆ ಅದಕ್ಕಾಗಿ ತಯಾರಿಯೂ ಅಷ್ಟೇ ಯೋಜಿತವಾಗಿರಲು ಸುಲಭ.

ಸೂಕ್ತವಾಗಿ ಯೋಜಿಸಿಕೊಂಡ ಗುರಿಯನ್ನು ತಲುಪುವ ಹಾದಿಯೂ ಅಷ್ಟೇ ಸುಸೂತ್ರವಾಗುತ್ತದೆ ಎಂಬುದು ಅನುಭವಿಗಳು ಹೇಳುವ ಮಾತು. ಈ ನಿಟ್ಟಿನಲ್ಲಿ ಪಿಯುಸಿ ಮಹತ್ತರ ಘಟ್ಟ.  ವಿದ್ಯಾರ್ಥಿಯ ಜೀವನದಲ್ಲಷ್ಟೇ ಅಲ್ಲ, ಪಾಲಕರ ವಲಯದಲ್ಲೂ ಪಿಯುಸಿ ಕುರಿತು ಮಹತ್ವಾಕಾಂಕ್ಷೆ ಮನೆ ಮಾಡಿರುತ್ತದೆ. ಮಕ್ಕಳ ಆಸಕ್ತಿ, ಶೈಕ್ಷಣಿಕ ಸಾಧನೆಯ ಮಟ್ಟ, ಅವರ ಸಾಮರ್ಥ್ಯ ಎಲ್ಲದರ ಜತೆಗೆ ಮುಂದಿನ ಅವರ ವೃತ್ತಿ ಭವಿಷ್ಯ ಎಲ್ಲದಕ್ಕೂ ಇದೊಂದು ಅತ್ಯಂತ ನಿರ್ಣಾಯಕ ಹಂತವೆಂದೇ ಪರಿಗಣಿತ. ಇದರ ನಂತರದ ಮಹತ್ವದ ಘಟ್ಟವೇ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಕಾನೂನು ಪದವಿ ಸೇರ್ಪಡೆಗೆ ಅಗತ್ಯವಾದ ಅಖಿಲ ಭಾರತೀಯ ಪ್ರವೇಶ ಪರೀಕ್ಷೆ. 

ಈ ಕುರಿತಂತೆ ವಿದ್ಯಾರ್ಥಿಗಳ ಪೋಷಕರ ಹಲವು ಕುತೂಹಲಗಳು, ಆಸಕ್ತಿ, ಭವಿಷ್ಯದ ಆತಂಕವೆಲ್ಲವೂ ಪ್ರಶ್ನೆಗಳಾಗುತ್ತವೆ.ಇವಕ್ಕೆಲ್ಲ ಪರಿಹಾರ ತೋರಿಸಲು, ಸಮಾಲೋಚಿಸಲು ತಜ್ಞರ ತಂಡವೇ ಸಿದ್ಧವಾಗಿದೆ.  ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಆಯೋಜಿಸಿದ ‘ಮಿಷನ್ ಅಡ್ಮಿಷನ್ 2011’ ಎಂಬ ಈ ಕೌನ್ಸೆಲಿಂಗ್ ಕಾರ್ಯಕ್ರಮ ಶನಿವಾರ ನಡೆಯಲಿದೆ.

ಉಪನ್ಯಾಸಕರು, ಭಾಷಣಕಾರರು ಮಾಹಿತಿಯ ಕಣಜವಾಗಿ ಉಪಸ್ಥಿತರಿರುತ್ತಾರೆ.  ಇಲ್ಲಿ ಬೆಂಗಳೂರು ವಿವಿ ಕುಲಪತಿ ಪ್ರೊ.ಎನ್. ಪ್ರಭುದೇವ್, ಐಐಟಿ ಬೆಂಗಳೂರು ಮುಖ್ಯಸ್ಥ ಪ್ರೊ. ಸಡಗೋಪನ್,  ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ರಿಜಿಸ್ಟ್ರಾರ್ ವಿ.ನಾಗರಾಜ್, ಬೆಂಗಳೂರು ವೈದ್ಯಕೀಯ ಕಾಲೇಜು ಪ್ರಾಧ್ಯಾಪಕ ಡಾ.ಎಚ್.ವಿ. ನಟರಾಜ, ಏಸ್ ಕ್ರಿಯೇಟಿವ್ ಲರ್ನಿಂಗ್‌ನ ಎಂ.ಡಿ. ಡಾ.ಜಿ. ಶ್ರೀಧರ್, ಪ್ಯಾರಾಡೈಮ್ ಎ ಆ್ಯಂಡ್ ಆರ್‌ನ ನಿರ್ದೇಶಕರಾದ ಅನಿತಾ ಅಖಿಲ ಅವರು ಅಖಿಲ ಭಾರತ ಮಟ್ಟದ ಪ್ರವೇಶ ಪರೀಕ್ಷೆಗಳ ಕುರಿತು ವಿವರಿಸಲಿದ್ದಾರೆ. 

ಸ್ಥಳ: ಶಿಕ್ಷಕರ ಸದನ, ಕೆ.ಜಿ. ರಸ್ತೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 2. ಪ್ರವೇಶ ಉಚಿತ. ಮೊದಲು ಬಂದವರಿಗೆ ಆದ್ಯತೆ. ಮಾಹಿತಿಗೆ: 2588 0202/ 216/ 226/ 225.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT