ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ವಿಶ್ವ ಪ್ರಾಣಿ ಸಂರಕ್ಷಣಾ ದಿನ

Last Updated 4 ಅಕ್ಟೋಬರ್ 2012, 14:45 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಅಕ್ಟೋಬರ್ 4  ವಿಶ್ವ ಪ್ರಾಣಿ ಸಂರಕ್ಷಣಾ ದಿನವನ್ನಾಗಿ ಎಲ್ಲೆಡೆ ಆಚರಿಸಲಾಗುತ್ತದೆ. ಈ ದಿನದ ಉದ್ದೇಶ ಅಳಿವಿನಂಚಿನ ಪ್ರಾಣಿಗಳ ಸಂರಕ್ಷಣೆ.

ಇಟಲಿಯ ಫ್ಲೋರೆನ್ಸಿನಲ್ಲಿ 1931 ರಲ್ಲಿ ಪರಿಸರ ವಿಜ್ಞಾನಿಗಳು ನಡೆಸಿದ ಸಮಾವೇಶದಲ್ಲಿ ಪ್ರಾಣಿಗಳ ಅಧಿದೇವತೆ ಸೇಂಟ್ ಫ್ರಾನ್ಸಿಸ್ ಜಯಂತಿಯಂದೇ ವಿಶ್ವ ಪ್ರಾಣಿ ಸಂರಕ್ಷಣಾ ದಿನವನ್ನಾಗಿ ಆಚರಿಸಲು ತೀರ್ಮಾನಿಸಿದ್ದರು. ಅಂದಿನಿಂದ ಈ ದಿನದಂದು ಪ್ರಪಂಚದಾದ್ಯಂತ ಅಳಿವಿನಂಚಿನಲ್ಲಿರುವ ಜೀವಿಗಳ ಹಾಗೂ ಎಲ್ಲ ಜೀವಿಗಳ ಉಳಿವಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

 ತಾಲ್ಲೂಕಿನ ತಲಕಾಯಲಬೆಟ್ಟ, ತಾತಹಳ್ಳಿ, ಜಂಗಮಕೋಟೆ, ಚೌಡಸಂದ್ರ, ವರದನಾಯಕನಹಳ್ಳಿ, ಸೊಕ್ಕನಹಳ್ಳಿ, ಕನ್ನಮಂಗಲ, ಹಿತ್ಲಹಳ್ಳಿ, ಚಿಕ್ಕದಾಸರಹಳ್ಳಿ, ಕನ್ನಮಂಗಲ, ಅಜ್ಜಕದಿರೇನಹಳ್ಳಿ, ಪಲ್ಲಿಚೇರ‌್ಲು, ಜಂಗಮಕೋಟೆ ಸೇರಿದಂತೆ ಸುಮಾರು 20 ಸಾವಿರ ಎಕರೆ ಕುರುಚಲು ಅರಣ್ಯ ಪ್ರದೇಶವಿದೆ. ಇಲ್ಲಿ ಕೃಷ್ಣಮೃಗಗಳು, ಜಿಂಕೆಗಳು, ಕಾಡುಹಂದಿ, ಮೊಲಗಳು ಸೇರಿದಂತೆ ಕೀಟಗಳು, ಹಕ್ಕಿಗಳು, ಚಿಟ್ಟೆಗಳು, ಹಾವುಗಳು, ಕೆಲವು ಅಪರೂಪದ ಜೀವಸಂಕುಲಗಳಿವೆ.  

 ಹೂವಿನ ಮಕರಂದ ಹೀರುವ ಚಿಟ್ಟೆ, ಚಿಟ್ಟೆಯನ್ನು ತಿನ್ನುವ ಓತಿಕ್ಯಾತ, ಅದನ್ನು ಬೇಟೆಯಾಡುವ ಹಕ್ಕಿಗಳು, ತರಾವರಿ ಜೇಡಗಳು, ವಿಚಿತ್ರ ಕಡ್ಡಿ ಹುಳಗಳು, ಸಸ್ಯ ವೈವಿಧ್ಯ ಹೀಗೆ ಎಲ್ಲ ಜೀವಸರಪಣಿ ಸೇರಿದರೇ ಪರಿಸರ. ಮನುಷ್ಯ ಇದರ ಭಾಗವಾಗದೆ ಹೊರಗೆ ನಿಂತರೆ ಅಸಮತೋಲನೆ ಪ್ರಾರಂಭವಾಗುತ್ತದೆ.

 `ಪ್ರಕೃತಿಯ ವೈಚಿತ್ರ್ಯಗಳನ್ನು ಗಮನಿಸುತ್ತಾ, ಅನುಭವಿಸುತ್ತಾ, ಆನಂದಿಸಿದರೆ ಮಾತ್ರ ವ್ಯಕ್ತಿತ್ವದ ಆಂತರಿಕ ಹಾಗೂ ಬಾಹ್ಯ ನಡವಳಿಕೆಗಳು ಪರಿಸರ ಸಂರಕ್ಷಣೆಯೆಡೆಗೆ ತುಡಿಯತೊಡಗುತ್ತವೆ. ಬಯಲು ಸೀಮೆ, ನೀರಿನ ಕೊರತೆ, ಒಣಹವೆ ಎಂಬೆಲ್ಲಾ ನಕಾರಾತ್ಮಕ ಅಂಶಗಳಿದ್ದರೂ ತಾಲ್ಲೂಕಿನಲ್ಲಿ ಅದ್ಭುತವಾದ ಹಾಗೂ ವೈವಿಧ್ಯಮಯವಾದ ಜೀವಸಂಕುಲಗಳಿವೆ. ಅವು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿವೆ. ಅವುಗಳನ್ನು ಉಳಿಸುವಲ್ಲಿ ನಾವೆಲ್ಲಾ ಶ್ರಮಿಸಬೇಕು~ ಎಂದು ಶಿಕ್ಷಕ ನಾಗಭೂಷಣ್ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT