ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಟಲಿಯಲ್ಲಿ ಭೂಕಂಪನ: 6 ಸಾವು

Last Updated 20 ಮೇ 2012, 19:30 IST
ಅಕ್ಷರ ಗಾತ್ರ

ರೋಮ್ (ಎಎಫ್‌ಪಿ): ಉತ್ತರ ಇಟಲಿಯಲ್ಲಿ ಭಾನುವಾರ ಮುಂಜಾನೆ ಪ್ರಬಲ ಭೂಕಂಪನ ಸಂಭವಿಸಿದ್ದು, ಘಟನೆಯಲ್ಲಿ ಅ್ಟಉ ಜನರು ಮೃತಪಟ್ಟು 50ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ.

ಭೂಕಂಪನದಿಂದಾಗಿ ಆತಂಕಿತರಾದ ಜನರು ತಮ್ಮ ಮನೆಗಳಿಂದ ಹೊರಗಡೆ ಓಡಿ ಬಂದರು ಎಂದು ತುರ್ತು ಸೇವೆಗಳ ಇಲಾಖೆ ಹೇಳಿದೆ.

ಭಾರತೀಯ ಕಾಲಮಾನ ಭಾನುವಾರ ಬೆಳಿಗ್ಗೆ 7.30ರ ಸುಮಾರಿಗೆ ಇದು ಸಂಭವಿಸಿದೆ. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.9ರಷ್ಟು ದಾಖಲಾಗಿತ್ತು.  ಭೂಕಂಪನದ ಕೇಂದ್ರ ಬಿಂದು ಫಿನಾಲೆ ಎಮಿಲಿಯಾ ಎಂಬ ಪ್ರದೇಶದಲ್ಲಿ ಭೂಮಿಯ 10 ಕಿ.ಮೀ ಆಳದಲ್ಲಿ ದಾಖಲಾಗಿತ್ತು.

ಉತ್ತರ ಇಟಲಿಯಾದ್ಯಂತ 20 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ನಂತರ  ಹಲವು ಬಾರಿ ಭೂಮಿ ನಡುಗಿದೆ ಎಂದು ತುರ್ತು ಸೇವೆಗಳ ಇಲಾಖೆ ಹೇಳಿದೆ. ಮೊಡೆನಾ ಪ್ರಾಂತ್ಯದಲ್ಲಿ 50 ಜನರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ ಎಂದೂ ಅದು ಹೇಳಿದೆ.

ಇದಕ್ಕಿಂತಲೂ ಮೊದಲು, ಇಟಲಿಯ ವಾಣಿಜ್ಯ ರಾಜಧಾನಿ ಮಿಲನ್ ಸಮೀಪದ ಲೋಂಬಾರ್ಡಿ ಪ್ರಾಂತ್ಯದಲ್ಲಿ  4.1ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿತ್ತು.

 ಜಪಾನ್‌ನಲ್ಲಿ ಕಂಪನ
ಟೋಕಿಯೊ:
ಜಪಾನ್‌ನಲ್ಲಿ ಭಾನುವಾರ ಎಂಟು ನಿಮಿಷಗಳ ಆಂತರದಲ್ಲಿ ಎರಡು ಬಾರಿ ಭೂಕಂಪನ ಉಂಟಾಗಿದ್ದು, ಕಂಪನ ತೀವ್ರತೆಯ ರಿಕ್ಟರ್ ಮಾಪಕದಲ್ಲಿ 6.2ರಷ್ಟಿತ್ತು ಎಂದು ಭೂಕಂಪನ ಶಾಸ್ತ್ರಜ್ಞ ಇಲಾಖೆ ಹೇಳಿದೆ. 
ಭೂಕಂಪನದ ಕೇಂದ್ರ ಬಿಂದು ಜಪಾನ್ ಈಶಾನ್ಯ ಪೆಸಿಫಿಕ್ ಸಾಗರದಲ್ಲಿ  ದಾಖಲಾಗಿತ್ತು. ಹಾನಿಯ ಬಗ್ಗೆ ಯಾವುದೇ ವರದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT