ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಪ್ರಧಾನಿಯನ್ನು ಕ್ಷಮಿಸದು: ಬಾಬಾ ರಾಮ್ ದೇವ್

Last Updated 7 ಜೂನ್ 2011, 5:30 IST
ಅಕ್ಷರ ಗಾತ್ರ

ಹರಿದ್ವಾರ, (ಪಿಟಿಐ): ~ನಾನೇನೋ ಪ್ರಧಾನಿ ಅವರನ್ನು ಕ್ಷಮಿಸಿಬಿಡಬಹುದು, ಆದರೆ, ಇತಿಹಾಸ ಅವರನ್ನು ಕ್ಷಮಿಸದು ಎಂದು  ಹೇಳಿರುವ ಯೋಗ ಗುರು ರಾಮ್ ದೇವ್ ಅವರು, ಬಲವಂತದಿಂದ ತಮ್ಮ ಸತ್ಯಾಗ್ರಹವನ್ನು ಹತ್ತಿಕ್ಕಿದ್ದು ಅವರು ಎಸಗಿದ ~ರಾಜಕೀಯ ಪಾಪ~ ಎಂದು ಆಪಾದಿಸಿದ್ದಾರೆ.

ಭಾನುವಾರ ರಾತ್ರಿ ನವದೆಹಲಿಯ ರಾಮಲೀಲಾ ಮೈದಾನದಲ್ಲಿನ ~ಸತ್ಯಾಗ್ರಹಿಗಳ ಮೇಲೆ ನಡೆಸಿದ ಪೊಲೀಸ್ ದೌರ್ಜನ್ಯವನ್ನು ದುರದೃಷ್ಟಕರ ಎಂದು ಹೇಳಿದ ಪ್ರಧಾನಿ ಅವರು, ತಮ್ಮ ಪಾಪದ ನಡೆಯನ್ನು ತಾವೇ ಒಪ್ಪಿಕೊಂಡಂತಾಗಿದೆ. ಪ್ರಧಾನಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರಿಂದ ನಾನು ಅವರು ಎಸಗಿದ ತಪ್ಪನ್ನು ಮನ್ನಿಸಿದ್ದೇನೆ~ ಎಂದು ಬಾಬಾ ರಾಮ್ ದೇವ್ ತಿಳಿಸಿದ್ದಾರೆ.

ಹರಿದ್ವಾರದಲ್ಲಿ ತಮ್ಮ ಭ್ರಷ್ಟಾಚಾರ ವಿರೋಧಿ ಚಳುವಳಿಯನ್ನು ಮುಂದುವರೆಸಿರುವ ಅವರು, ಮಂಗಳವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಪ್ರಧಾನಿ ಅವರು ತಮ್ಮ ನಡೆಯಿಂದ ಪ್ರಜಾಪ್ರಭುತ್ವಕ್ಕೆ ಮಸಿ ಬಳೆದಿದ್ದಾರೆ. ಹೀಗಾಗಿ ಪ್ರಧಾನಿ ಅವರ ~ರಾಜಕೀಯ ಪಾಪ~ದ ನಡೆಯನ್ನು ಭಾರತದ ಚರಿತ್ರೆಯಲ್ಲಿ ಅಷ್ಟೇ ಅಲ್ಲ ಜಗತ್ತಿನ ಚರಿತ್ರೆಯಲ್ಲಿಯೂ ಅವರಿಗೆ ಕ್ಷಮೆ ಎಂಬುದಿರುವುದಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT