ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೀಗ ಸಿದ್ದವಾಗಿದೆ ಹಾರುವ ಬೈಸಿಕಲ್...

Last Updated 4 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಲಂಡನ್(ಪಿಟಿಐ): ಬ್ರಿಟನ್‌ನ ಇಬ್ಬರು ವಿನ್ಯಾಸಕರು ಮತ್ತು ವಾಯುಯಾನ ಉತ್ಸಾಹಿಗಳು ಸೇರಿ ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಹಾರುವ ಸೈಕಲನ್ನು ಅಭಿವೃದ್ಧಿಪಡಿಸಿದ್ದಾರೆ.

ಹಾರಾಡುವ ಸೈಕಲ್ ಭೂಮಿಯಿಂದ ನಾಲ್ಕು ಸಾವಿರ ಅಡಿ ಎತ್ತರದಲ್ಲಿ ಪ್ರತಿ ಗಂಟೆಗೆ 40 ಕಿ.ಮೀ ವೇಗದಲ್ಲಿ ಪ್ರಯಾಣ ಬೆಳೆಸಲಿದೆ. ಹಾರಾಡುವ ಸೈಕಲ್‌ನ್ನು ಸರಳವಾಗಿ ಕೆಲಸಮಾಡುವ ವಿಮಾನ ವಿಭಾಗಕ್ಕೆ ಸೇರಿಸಲಾಗಿದೆ.

ನಾಲ್ಕು ಸಾವಿರ ಅಡಿ ಎತ್ತರದವರೆಗಿನ ವ್ಯಾಪ್ತಿಯಲ್ಲಿ ಚಾಲನೆ ಮಾಡಲು ಪರವಾನಗಿ ಪತ್ರದ ಅವಶ್ಯಕತೆ ಇರುವುದಿಲ್ಲ. ಈ ಸೈಕಲ್ ತುಂಬಾ ಕಡಿವೆು ತೂಕದ್ದಾಗಿದ್ದು, ಹಿಂಬದಿಯಲ್ಲಿ ಶಕ್ತಿಯುತ ರೆಕ್ಕೆಗಳನ್ನು ಅಳವಡಿಸಲಾಗಿದೆ.

`ಜೈವಿಕ ಇಂಧನದಿಂದ ಕಾರ್ಯನಿರ್ವಹಿಸುವ ಯಂತ್ರವನ್ನು ಸೈಕಲ್‌ನ ಹಿಂದೆ ಜೋಡಿಸಲಾಗಿರುತ್ತದೆ. ಇದರ ರೆಕ್ಕೆಗಳನ್ನು ತಿರುಗುವಂತೆ ಮಾಡುವವರೆಗೆ ಇದು ಸಾಮಾನ್ಯ ಸೈಕಲ್‌ನಂತೆಯೇ ಕಾರ್ಯನಿರ್ವಹಿಸಲಿದೆ. ಯಂತ್ರ ಕಾರ್ಯಾರಂಭ ಮಾಡಿದಾಗ ಸೈಕಲ್ ಆಗಸಕ್ಕೆ ಹಾರಲಿದೆ' ಎಂದು ಇದನ್ನು ಅಭಿವೃದ್ಧಿಪಡಿಸಿರುವ ವಿನ್ಯಾಸಕರಾದ ಫೊಡೆನ್ ಮತ್ತು ಯಾನ್ನಿಕ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT