ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನಾಂ ಅರ್ಜಿ ವಿಚಾರಣೆ 28ಕ್ಕೆ ಮುಂದೂಡಿಕೆ

Last Updated 8 ಜನವರಿ 2014, 6:20 IST
ಅಕ್ಷರ ಗಾತ್ರ

ಕಳಸ: ಹೋಬಳಿಯ ಬಹು ವಿವಾದಿತ ಇನಾಂ ಭೂಮಿಯ ಬಗ್ಗೆ ಕೃಷಿಕರು ಹೈಕೋರ್ಟಿನಲ್ಲಿ ಸಲ್ಲಿಸಿರುವ ಮರು ಪರಿಶೀಲನಾ ಅರ್ಜಿಯ ವಿಚಾರಣೆ ಮಂಗಳವಾರ ನ್ಯಾಯಾಲಯದಲ್ಲಿ ನಡೆದು ಇದೇ 28ಕ್ಕೆ ಮುಂದೂಡಲ್ಪಟ್ಟಿತು.

 ಕಳೆದ ವರ್ಷ ಹೈಕೋರ್ಟ್ ಇನಾಂ ಭೂಮಿಯನ್ನು ಅರಣ್ಯ ಎಂದು ತೀರ್ಪು ನೀಡಿದ ನಂತರ ಕೃಷಿಕರು ಮರು ಪರಿಶೀ ಲನಾ ಅರ್ಜಿ ಸಲ್ಲಿಸಿದ್ದರು. ಮಂಗಳ ವಾರ ನಡೆದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಧೀಶರು ಇನಾಂ ಭೂಮಿ ಬಗ್ಗೆ ಕಳೆದ ವರ್ಷವೇ ತೀರ್ಪು ನೀಡಿದ್ದರೂ ಅರಣ್ಯ ಭೂಮಿ ಒತ್ತುವರಿ ಮಾಡಿರು ವವರನ್ನು ಈವರೆಗೆ ಯಾಕೆ ಒಕ್ಕಲೆ ಬ್ಬಿಸಿಲ್ಲ. ಈ ವಿಚಾರದಲ್ಲಿ ನ್ಯಾಯಾಂಗ ನಿಂದನೆ ಆಗಿದೆ ಎಂದು ಅರಣ್ಯ ಇಲಾಖೆಯನ್ನು ತರಾಟೆಗೆ ತೆಗೆದು ಕೊಂಡಿತು ಎಂದು ನ್ಯಾಯಾಲ ಯದಲ್ಲಿ ಹಾಜರಿದ್ದ ಇನಾಂ ಭೂಮಿ ಸಂತ್ರಸ್ತರ ಸಮಿತಿ ಕಾರ್ಯದರ್ಶಿ ಟಿ.ವಿ. ವೆಂಕಟಸುಬ್ಬಯ್ಯ ’ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

 ಆಗ ಮಧ್ಯಪ್ರವೇಶಿಸಿದ ಅಡ್ವೋಕೇಟ್‌ ಜನರಲ್‌ ರವಿವರ್ಮ ಕುಮಾರ್‌, ಇನಾಂ ಭೂಮಿಯಲ್ಲಿ ನೂರಾರು ಸಣ್ಣ ಹಿಡುವಳಿದಾರರು ಇದ್ದಾರೆ. ಹಲ ವಾರು ಗ್ರಾಮಗಳು, ಇಡೀ ನಾಗರೀ ಕತೆಯೇ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಇನಾಂ ಭೂಮಿ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಿದೆ ಎಂದು ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ವಾದಸರಣಿಯಲ್ಲಿ ನ್ಯಾಯಾ ಧೀಶರಿಗೆ ಮನನ ಮಾಡಿದ್ದಾಗಿಯೂ ತಿಳಿದು ಬಂದಿದೆ.

ಇದೇ 28ರ ಒಳಗೆ ಇನಾಂ ಭೂಮಿ ಬಗ್ಗೆ ಸರ್ಕಾರದ ಸ್ಪಷ್ಟ ನಿಲುವನ್ನು ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಸೂಚನೆ ನೀಡಿದ ನ್ಯಾಯಾಧೀಶರು ವಿಚಾರಣೆಯನ್ನು ಇದೇ 28ಕ್ಕೆ ಮುಂದೂಡಿದರು ಎಂದೂ ವೆಂಕಟ ಸುಬ್ಬಯ್ಯ ತಿಳಿಸಿದ್ದಾರೆ.

ಅರಣ್ಯ ಸಚಿವರ ಭೇಟಿ: ಮೂಡಿಗೆರೆ ತಾಲ್ಲೂಕಿನಲ್ಲಿ ಮಂಗಳವಾರ ಪ್ರವಾಸ ಕೈಗೊಂಡಿದ್ದ ಅರಣ್ಯ ಸಚಿವ ರಮಾನಾಥ ರೈ ಅವರನ್ನು ಕಳಸ ಬ್ಲಾಕ್‌ ಕಾಂಗ್ರೆಸ್‌ ನಿಯೋಗ ಮಂಗಳವಾರ ಭೇಟಿ ಮಾಡಿ ಇನಾಂ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿದೆ. ಇದೇ 28ರಂದು ಮೊಕದ್ದ ಮೆಯ ಮಹತ್ವದ ವಿಚಾರಣೆ ನಡೆಯ ಲಿದ್ದು, ಸರ್ಕಾರ ಅಷ್ಟರೊಳಗೆ ಇನಾಂ ವಿವಾದ ಬಗೆಹರಿಸುವ ಬಗ್ಗೆ ಸಂಪು ಟದಲ್ಲಿ ತೀರ್ಮಾನ ತೆಗೆದು ಕೊಂಡು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸುವ ನಿರೀಕ್ಷೆ ಇದೆ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ಕೆ.ಸಿ. ಧರ ಣೇಂದ್ರ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT