ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಇನ್ನಷ್ಟು ಮಕ್ಕಳನ್ನು ಕೊಲ್ಲುತ್ತಿದ್ದ'

ನ್ಯೂಟೌನ್ ಶಾಲೆಯಲ್ಲಿ ಗುಂಡಿನ ದಾಳಿ ಪ್ರಕರಣ
Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಐಎಎನ್‌ಎಸ್):   `ನ್ಯೂಟೌನ್ ಶಾಲೆಯಲ್ಲಿ 26 ಮಕ್ಕಳನ್ನು ಬಲಿ ತೆಗೆದುಕೊಂಡ ಆಡಮ್ ಲಾಂಜಾ, ಪೊಲೀಸರು ಬರುತ್ತಿರುವುದನ್ನು ಗಮನಿಸಿದ ಕೂಡಲೇ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ. ಇಲ್ಲದಿದ್ದರೆ    ಆತ ಇನ್ನಷ್ಟು ಮಕ್ಕಳನ್ನು ಕೊಲೆ ಮಾಡುತ್ತಿದ್ದ' ಎಂದು ಕನೆಕ್ಟಿಕಟ್ ಗವರ್ನರ್ ಡಾನ್ ಮೌಲಿ ತಿಳಿಸಿದ್ದಾರೆ.

`ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಲಾಂಜಾನಿಗೆ ಇನ್ನಷ್ಟು ಮಕ್ಕಳನ್ನು ಕೊಲ್ಲುವ ಉದ್ದೇಶ      ಇತ್ತು' ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

`ಒಂದು ತರಗತಿಯಲ್ಲಿ ಮನಬಂದಂತೆ ಗುಂಡು ಹಾರಿಸಿ ಮಕ್ಕಳನ್ನು ಬಲಿ ತೆಗೆದುಕೊಂಡಿದ್ದ ಲಾಂಜಾ, ಬಳಿಕ ಮತ್ತೊಂದು ತರಗತಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಪೊಲೀಸರನ್ನು ಕಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ' ಎಂದು ಡಾನ್ ಮೌಲಿ ತಿಳಿಸಿದ್ದಾರೆ.

`ಮಕ್ಕಳನ್ನು ಸಾಯಿಸುವುದಕ್ಕೆ ಕಾರಣವೇನು ಎನ್ನುವುದರ ಬಗ್ಗೆ ಪೊಲೀಸರಿಗೆ ಯಾವುದೇ ಪತ್ರ ಅಥವಾ ಡೈರಿ ಸಿಕ್ಕಿಲ್ಲ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಬೆರೆಯದೇ ರೀತಿಯಲ್ಲಿ ಎದುರಿಸುವ ಅಗತ್ಯವಿದೆ ಎನ್ನುವುದು ನನ್ನ ಅಭಿಪ್ರಾಯ. ಈ ಬಗ್ಗೆ ನಾವೆಲ್ಲರು ಮುಕ್ತವಾಗಿ ಮಾತನಾಡುವ ಅವಶ್ಯಕತೆಯಿದೆ' ಎಂದು ಮೌಲಿ ಅಭಿಪ್ರಾಯಪಟ್ಟಿದ್ದಾರೆ.

ಒಬಾಮ ಭರವಸೆ
`ಶಾಲಾ ಮಕ್ಕಳ ಹತ್ಯೆಯಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಲು  ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅಭಯ ನೀಡಿದ್ದಾರೆ.

ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಮಕ್ಕಳ ಸಂಬಂಧಿಕರನ್ನು ಭೇಟಿ ಮಾಡಿದ ಬಳಿಕ ಒಬಾಮ ಈ ಭರವಸೆ   ನೀಡಿದರು.
ನ್ಯೂಟೌನ್‌ನಲ್ಲಿ ಶುಕ್ರವಾರ ನಡೆದ ಘಟನೆಯಲ್ಲಿ 6ರಿಂದ 7 ವರ್ಷದ 20 ಮಕ್ಕಳು ಸೇರಿ 26 ಜನ ಮೃತಪಟ್ಟಿದ್ದರು. ಕೃತ್ಯವೆಸಗಿದ ಆಡಮ್ ಲಾಂಜಾ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದ.

ಬಂದೂಕು ತರಬೇತಿ ಪಡೆದಿದ್ದ?

ನ್ಯೂಯಾರ್ಕ್ (ಪಿಟಿಐ): ಆಡಮ್, ತಾಯಿ     ನ್ಯಾನ್ಸಿ ಲಾಂಜಾ ಜತೆ ಕನೆಕ್ಟಿಕಟ್‌ನಲ್ಲಿ ಬಂದೂಕು ತರಬೇತಿ ನೀಡುವ ಸ್ಥಳಕ್ಕೆ ಭೇಟಿ ನೀಡ್ದ್ದಿದ' ಎಂದು ಅಮೆರಿಕದ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.

`ನ್ಯಾನ್ಸಿ ಅವರು ಅನೇಕ ಬಾರಿ ತರಬೇತಿ ಸ್ಥಳಕ್ಕೆ ಭೇಟಿ ನೀಡಿದ್ದರು. ಆದರೆ ಈ ಎಲ್ಲ ಸಂದರ್ಭಗಳಲ್ಲಿಯೂ ಅವರೊಂದಿಗೆ ಆಡಮ್ ಕೂಡ ಇದ್ದನೇ ಎಂಬುದು ಇನ್ನೂ ಖಚಿತವಾಗಿಲ್ಲ' ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

`ಕನೆಕ್ಟಿಕಟ್‌ನ ಬಂದೂಕು ತರಬೇತಿ ಸ್ಥಳಕ್ಕೆ ಲಾಂಜಾ ಭೇಟಿ ನೀಡಿರುವುದು ಖಚಿತವಾಗಿದೆ. ಆದರೆ, ಆತ ಅಲ್ಲಿ ಗುಂಡು ಹಾರಿಸಿದ್ದನೇ ಎನ್ನುವುದು ತಿಳಿದು ಬಂದಿಲ್ಲ' ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT