ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ಆನ್‌ಲೈನ್ ಹರಾಜು

Last Updated 4 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೇ ಉಳಿದ ಆಟಗಾರರಿಗೆ ಮತ್ತೊಂದು ಅವಕಾಶವಿದೆ. ಅದು ಆನ್‌ಲೈನ್ ಹರಾಜು!

`ಪ್ರತಿ ತಂಡಗಳು ತಲಾ 11 ಮಂದಿ ವಿದೇಶಿ ಆಟಗಾರರನ್ನು ಹೊಂದಬಹುದು. ಕಡಿಮೆ ಇದ್ದವರು ಆನ್‌ಲೈನ್ ಮೂಲಕ ಹರಾಜಿಗೆ ಬಿಡ್ ಸಲ್ಲಿಸಬಹುದು~ ಎಂದು ಐಪಿಎಲ್ ಆಡಳಿತ ತಿಳಿಸಿದೆ.

`ಈಗ ಒಟ್ಟು 119 ಆಟಗಾರರು ಮಾರಾಟವಾಗದೇ ಉಳಿದಿದ್ದಾರೆ. ಇದರಲ್ಲಿ ಭಾರತದ ವಿ.ವಿ.ಎಸ್.ಲಕ್ಷ್ಮಣ್ ಹಾಗೂ ವಿ.ಆರ್.ವಿ.ಸಿಂಗ್ ಇದ್ದಾರೆ. ಹಾಗಾಗಿ ಯಾರಿಗೆ ಈ ಆಟಗಾರರು ಬೇಕು ಹಾಗೂ ಎಷ್ಟು ಹಣ ನೀಡುತ್ತಿರಿ ಎಂಬುದನ್ನು ನಮಗೆ ತಿಳಿಸಬೇಕು~ ಎಂದು ಐಪಿಎಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರ ರಾಜನ್ ಹೇಳಿದ್ದಾರೆ.

ಪ್ರತಿ ತಂಡ ಒಟ್ಟು 33 ಆಟಗಾರರನ್ನು ಹೊಂದಲು ಅವಕಾಶವಿದೆ. ಇದರಲ್ಲಿ 11 ವಿದೇಶಿ ಆಟಗಾರರು ಇರಬಹುದು. ಆದರೆ ಆಡುವ 11 ಮಂದಿಯಲ್ಲಿ ವಿದೇಶದ 4 ಆಟಗಾರರಿಗೆ ಮಾತ್ರ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT