ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಕ್ರಮ ಕೈಗೊಳ್ಳದ ಸರ್ಕಾರ

Last Updated 15 ಸೆಪ್ಟೆಂಬರ್ 2011, 19:35 IST
ಅಕ್ಷರ ಗಾತ್ರ

ಬೆಂಗಳೂರು: `ದೋಷದಿಂದ ಕೂಡಿವೆ ಎನ್ನಲಾಗಿದ್ದ ದಾಖಲೆಗಳ ಪರಿಶೀಲನೆ ನಡೆದರೂ ಸಹ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಇನ್ನೂ ಪ್ರಶಸ್ತಿ ಪ್ರದಾನದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಇದರಿಂದ ನಿತ್ಯ ಮುಜುಗರ ಎದುರಿಸುವಂತಾಗಿದೆ~ ಎಂದು ಈ ಸಲ ಏಕಲವ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದ ಕರಾಟೆ ಪಟು ನವೀನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೆಪ್ಟಂಬರ್ ಮೊದಲ ವಾರದಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ ದೇಹದಾರ್ಢ್ಯ ಪಟು ರೋಷನ್ ಫರಾರೋ ಹಾಗೂ ನಾನು ಸಮಿತಿ ಎದುರು ದಾಖಲೆ ಹಾಜರು ಪಡಿಸಿದ್ದೆವು. ಇದಾಗಿ ಹತ್ತು ದಿನ ಕಳೆದರೂ ನಮಗೆ ಯಾವುದೇ ಮಾಹಿತಿ ಗೊತ್ತಾಗುತ್ತಿಲ್ಲ. ಸಂಪರ್ಕಕ್ಕೆ ಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಅನಿವಾರ್ಯವಾಗಿ ಕೋರ್ಟ್ ಮೊರೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ~ ಎಂದು ಪತ್ರಿಕೆಗೆ ತಿಳಿಸಿದರು.

`ಪ್ರಶಸ್ತಿ ಬರದಿದ್ದರೂ ಖುಷಿಯಾಗಿರುತ್ತಿತ್ತು. ಆದರೆ ಹೆಸರು ಘೋಷಣೆ ಮಾಡಿ ನೀಡದೇ ಇದ್ದದ್ದು ನಿರಾಸೆ ಉಂಟು ಮಾಡಿದೆ. ಸ್ನೇಹಿತರ ಎದುರು, ಕಚೇರಿಯಲ್ಲಿ ತಲೆ ತಗ್ಗಿಸುವಂತಾಗಿದೆ~ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ವರದಿ ಬಂದ ಬಳಿಕ ಕ್ರಮ: 15 ಜನ ಆಟಗಾರರಿಗೆ ಆಗಸ್ಟ್ 29ರಂದು ಪ್ರಶಸ್ತಿ ನೀಡಲು ನಿರ್ಧರಿಸಿದ್ದೆವು. ಆದರೆ ಮೂವರು ಆಟಗಾರರ ದಾಖಲೆಗಳಲ್ಲಿ ದೋಷ ಇರುವ ಬಗ್ಗೆ ಆಕ್ಷೇಪಣೆ ಬಂದಿತ್ತು. ಆದ್ದರಿಂದ ಆ ದಾಖಲೆಗಳನ್ನು ಸಮಿತಿ ಪರಿಶೀಲನೆ ನಡೆಸುತ್ತಿದೆ. ಸಮಿತಿ ವರದಿ ನೀಡಿದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಆರ್. ಪೆರುಮಾಳ್ `ಪ್ರಜಾವಾಣಿ~ಗೆ ತಿಳಿಸಿದರು.

ಈ ಕುರಿತು ಕ್ರೀಡಾ ಇಲಾಖೆಯ ಅಧಿಕಾರಿಗಳ ಸ್ಪಷ್ಟನೆ ಪಡೆಯಲು ದೂರವಾಣಿ ಮೂಲಕ ಸಂಪರ್ಕಿಸಲಾಯಿತಾದರೂ ಅದಕ್ಕೆ ಅವರು ಪ್ರತಿಕ್ರಿಯಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT