ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಬಾರದ ಸರ್ಕಾರಿ ಪುಸ್ತಕ: ಮಕ್ಕಳಿಗೆ ಪುಸ್ತಕದ ಜೆರಾಕ್ಸ್ ಗತಿ!

Last Updated 5 ಡಿಸೆಂಬರ್ 2012, 5:18 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಹಲವು ಖಾಸಗಿ ಶಾಲೆಗಳಿಗೆ ಅರ್ಧ ವರ್ಷ ಕಳೆದರೂ ಸರ್ಕಾರದಿಂದ ಪೂರೈಕೆಯಾ ಗಬೇಕಾದ ಪಠ್ಯ ಪುಸ್ತಕ ಪೂರೈಕೆ ಯಾಗದೇ ವಿದ್ಯಾರ್ಥಿಗಳು ಜೆರಾಕ್ಸ್ ಪುಸ್ತಕಗಳನ್ನೇ ಬಳಸಿ ಕಲಿಕೆ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ.

ಖಾಸಗಿ ಶಾಲೆಗಳಿಗೆ ಸರ್ಕಾರವು ಹಲವು ಪುಸ್ತಕಗಳನ್ನು ಪೂರೈಕೆ ಮಾಡಲು ಕಳೆದ ಜೂನ್ ತಿಂಗಳಿ ನಲ್ಲಿಯೇ ವಿದ್ಯಾರ್ಥಿಗಳಿಂದ ಹಣ ತೆಗೆದುಕೊಂಡಿದ್ದು, ಇದುವರೆಗೂ ಒಂದನೇ ಮತ್ತು ಮೂರನೇ ತರಗತಿ ಸೇರಿದಂತೆ ಹಲವು ತರಗತಿಗಳಿಗೆ ಆಂಗ್ಲ ಪುಸ್ತಕಗಳು ದೊರೆತಿಲ್ಲ. ಪುಸ್ತಕಗಳಿಗೆ ಹಣ ಪಾವತಿಸಿದರೂ ಸರ್ಕಾರಿ ಪುಸ್ತ ಕಗಳು ದೊರೆಯದೇ ಇರುವುದರಿಂದ ಖಾಸಗಿ ಶಾಲೆಗಳ ಆಡಳಿತ ಮಂಡ ಳಿಯೇ ಪಠ್ಯ ಪುಸ್ತಕದ ಜೆರಾಕ್ಸ್ ಪ್ರತಿ ಮುದ್ರಿಸಿ ವಿದ್ಯಾರ್ಥಿಗಳಿಗೆ ನೀಡಿದ್ದಾರೆ.

`ಸರ್ಕಾರಿ ಪುಸ್ತಕ ವಿತರಣೆ ಎಂಬುದು ಪ್ರತಿ ವರ್ಷವೂ ದೊಡ್ಡ ಹಗರಣವಾಗಿದ್ದು, ಇಲಾಖೆಯ ಕೆಲ ವ್ಯಕ್ತಿಗಳು ವಿದ್ಯಾರ್ಥಿಗಳಿಂದ ವಸೂಲಿ ಮಾಡಿದ ಹಣವನ್ನು ಖಾಸಗಿ ಶಾಲೆಗಳಿಂದ ಪಡೆದು ಸರ್ಕಾರಕ್ಕೆ ಪಾವತಿ ಮಾಡದೇ ವಂಚನೆ ಮಾಡಿ ರುವುದರಿಂದ ಸರ್ಕಾರಿ ಪುಸ್ತಕಗಳು ಪೂರೈಕೆಯಾಗುತ್ತಿಲ್ಲ. ಶಾಲೆಗಳು ಕೇಳಿದರೆ ಪುಸ್ತಕ ಬಂದಿಲ್ಲ ಎಂಬ ಸಬೂಬು ಹೇಳುತ್ತಾರೆ ಇದರ ಬಗ್ಗೆ ಸೂಕ್ತ ತನಿಖೆ ನಡೆದರೆ ಹಲವು ವರ್ಷ ಗಳಿಂದ ನಡೆಯುತ್ತಿರುವ ಪುಸ್ತಕಗಳ ಪೂರೈಕೆ ಹಗರಣ ಹೊರ ಬರುತ್ತದೆ' ಎನ್ನುತ್ತಾರೆ ಪಟ್ಟಣದ ಖಾಸಗಿ ಶಾಲೆಯ  ಪ್ರಾಂಶುಪಾಲರೊಬ್ಬರು.

ಕಳೆದ ವರ್ಷವೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಹಣ ಪಾವತಿಸಿದ್ದರೂ ಕೊನೆಯವರೆಗೂ ಕೆಲವು ಪಠ್ಯ ಪುಸ್ತಕಗಳು ಲಭ್ಯವಾಗಲಿಲ್ಲ. ಅಧಿಕಾರಿಗಳನ್ನು ಕೇಳಿದರೆ ಸರ್ಕಾರದಿಂದ ಬಂದಿಲ್ಲ ಎಂಬ ಉತ್ತರ ಬರುತ್ತದೆ. ಜೆರಾಕ್ಸ್ ಪ್ರತಿಗಳಿಂದ ವಿದ್ಯಾರ್ಥಿಗಳ ಕಲಿಕೆಗೆ ಸಮಸ್ಯೆಯಾಗುತ್ತಿರುವುದರಿಂದ ಇನ್ನು ಎರಡು ವಾರಗಳ ಒಳಗೆ ಎಲ್ಲಾ ಖಾಸಗಿ ಶಾಲೆಗಳಿಗೆ ಪಠ್ಯ ಪುಸ್ತಕಗಳು ಇಲಾಖೆ ನೀಡಬೇಕು.

ಇಲ್ಲದಿದ್ದರೆ ನ್ಯಾಯಾಲಯದ ಮೊರೆ ಹೋಗಬೇ ಕಾಗುತ್ತದೆ ಎಂದು ತಾಲ್ಲೂಕು ಖಾಸಗಿ ಶಾಲೆಗಳ ಪೋಷಕರ ಸಂಘದ ಅಧ್ಯಕ್ಷ ಮಧುಸೂಧನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT