ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫಿ ಮೂರ್ತಿ ಬೆಂಬಲಿಸಬಾರದು: ವಿಶ್ವನಾಥ್

Last Updated 16 ಅಕ್ಟೋಬರ್ 2011, 9:35 IST
ಅಕ್ಷರ ಗಾತ್ರ

ಮೈಸೂರು: `ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ ಎಂದು ಹೇಳಿಕೊಂಡಿರುವ ಇನ್ಫೋಸಿಸ್ ನಾರಾಯಣಮೂರ್ತಿ ಅವರನ್ನು ಯಾವ ಪಕ್ಷವೂ ಬೆಂಬಲಿಸಬಾರದು. ಅವರು ರಾಷ್ಟ್ರದ್ರೋಹಿ~ ಎಂದು ಸಂಸದ ಎ.ಎಚ್.ವಿಶ್ವನಾಥ್ ಇಲ್ಲಿ ಕಿಡಿಕಾರಿದರು.

`ಮೈಸೂರಿನ ಇನ್ಫೋಸಿಸ್ ಆವರಣದಲ್ಲಿ ನಡೆದ ಸಮಾರಂಭವೊಂದರಲ್ಲಿ ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಮೂರ್ತಿ ಸೇರಿದಂತೆ ಸಿಬ್ಬಂದಿ ಗೌರವ ಸಲ್ಲಿಸದೆ ಅಗೌರವ ತೋರಿದ್ದಾರೆ. ರಾಷ್ಟ್ರಗೀತೆ, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸದ ಕೊಳಕು ಮನಸ್ಸಿನ ಮೂರ್ತಿ ರಾಷ್ಟ್ರದ್ರೋಹಿಗಳು~ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

`ಸಂವಿಧಾನಿಕವಾಗಿ ಮೂರ್ತಿ ಅವರು ಯಾವುದೇ ಹುದ್ದೆ ಅಲಂಕರಿಸಿಲ್ಲ. ಅವರ ನಡವಳಿಕೆ ಪ್ರಜಾತಂತ್ರ ವ್ಯವಸ್ಥೆಗೆ ವಿರೋಧಿಯಾಗಿದೆ. ಉದ್ಯಮಿಯಾದ ಮೂರ್ತಿ ಮೀಸಲಾತಿ ವಿರೋಧಿ. ಅವರ ಕಂಪೆನಿಯಲ್ಲಿ ಮೀಸಲಾತಿಯಡಿ ಯಾರಿಗೂ ಉದ್ಯೋಗ ನೀಡಿಲ್ಲ. ಕನ್ನಡಿಗರಿಗೆ ಅನ್ಯಾಯ ಮಾಡಿರುವ ಅವರು ಕನ್ನಡ ವಿರೋಧಿಗಳು~ ಎಂದು ಗುಡುಗಿದರು.

`ರಾಜಸ್ತಾನದ ಕೋಟಾ ಮತ್ತು ಬನ್ಸಾಲ್ ಐಐಟಿಯಿಂದ ಸುಮಾರು 50-60 ಸಾವಿರ ಹಿಂದುಳಿದ ವರ್ಗದ ಅಭ್ಯರ್ಥಿಗಳು ತರಬೇತಿ ಪಡೆದು ಹೊರಬರುತ್ತಾರೆ. ಈ ಸಂಸ್ಥೆಯಿಂದ ಹೊರಬಂದ ಪ್ರತಿಭಾನ್ವಿತರನ್ನು ಸತ್ವವಿಲ್ಲದ ಬೇರುಗಳು, ಸಂಸ್ಥೆ ಮುಚ್ಚುವಂತೆ ಮೂರ್ತಿ ಹೇಳಿರುವುದು ಸರಿಯಲ್ಲ. ಬಡವರು ಬುದ್ಧಿವಂತರಾದರೆ ಇವರು ಸಹಿಸುವುದಿಲ್ಲ. ಇವರು ಪ್ರಜಾತಂತ್ರ ವಿರೋಧಿ~ ಎಂದು ದೂರಿದರು.

`ಮೈಸೂರು, ಬೆಂಗಳೂರು ಮತ್ತು ಮಂಗಳೂರಿನಲ್ಲಿ ಇವರು ಐಟಿ ಉದ್ಯಮಕ್ಕೆ ನೂರಾರು ಎಕರೆ ಭೂಮಿ ಪಡೆದಿದ್ದಾರೆ. 20 ಎಕರೆ ಭೂಮಿಯಲ್ಲಿ ಸಾಕಷ್ಟು ವ್ಯವಹಾರ ಮಾಡಬಹುದು. ಹೆಲಿಕಾಪ್ಟರ್ ಸಹ ತಂದು ಇಳಿಸಬಹುದು. ಚಿಪ್‌ಗಳನ್ನು ತಯಾರಿಸಲು ಇನ್ಫೋಸಿಸ್‌ಗೆ ಇಷ್ಟು ದೊಡ್ಡ ಪ್ರಮಾಣದ ಭೂಮಿ ಬೇಕಿತ್ತೆ?~ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT