ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೊಸಿಸ್‌ಗೆ ಬಾಲಕೃಷ್ಣನ್‌ ರಾಜೀನಾಮೆ

Last Updated 20 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಇನ್ಫೊಸಿಸ್‌­ನಲ್ಲಿ ರಾಜೀನಾಮೆ ಸರಣಿ ಮುಂದುವರಿ­ದಿದೆ.  ಕಂಪೆನಿಯ ನಿರ್ದೇಶಕ ಮಂಡಳಿ ಸದಸ್ಯ­ರಾಗಿದ್ದ  ಮತ್ತು ಹೊರಗುತ್ತಿಗೆ ಸೇವೆಗಳ (ಬಿಪಿಒ) ಮುಖ್ಯಸ್ಥರಾಗಿದ್ದ ವಿ.ಬಾಲ­ಕೃಷ್ಣನ್‌ ಮತ್ತು  ಹಿರಿಯ ಉಪಾಧ್ಯಕ್ಷ ಮತ್ತು ಕಾರ್ಯ­ಕಾರಿ ಮಂಡಳಿ ಸದಸ್ಯ ಸುಬ್ರ­ಮಣ್ಯಂ ಗೋಪರಾಜು ರಾಜೀನಾಮೆ ಸಲ್ಲಿಸಿದ್ದಾರೆ.

ಈ ಮೂಲಕ ಕಳೆದ ಆರು ತಿಂಗಳಲ್ಲಿ (ನಾರಾಯಣ ಮೂರ್ತಿ ಅವರು ಜೂನ್‌­ನಲ್ಲಿ ಮತ್ತೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ) ಇನ್ಫೊಸಿಸ್‌ ತೊರೆದ  ಉನ್ನತ ಶ್ರೇಣಿಯ ಅಧಿಕಾರಿಗಳ ಸಂಖ್ಯೆ ಎಂಟಕ್ಕೆ ಏರಿದೆ.

ಬಾಲಕಷ್ಣನ್‌ 1991ರಲ್ಲಿ ಇನ್ಫೊ ಸಿಸ್‌ ಸೇರಿದ್ದರು. ಮುಖ್ಯ ಹಣಕಾಸು ಅಧಿಕಾರಿ­ಯಾ­ಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಈಗ ಕಂಪೆನಿಯ ಮುಖ್ಯ ಕಾರ್ಯ­ನಿರ್ವಾ­ಹಕ ಅಧಿಕಾರಿ ಆಗಿರುವ ಎಸ್‌.ಡಿ.­ಶಿಬು­ಲಾಲ್‌ 2015­ರಲ್ಲಿ ನಿವೃ ತ್ತರಾಗಲಿ­ದ್ದಾರೆ. ನಂತರದ ‘ಸಿಇಒ’   ಬಾಲ­ಕೃಷ್ಣನ್‌ ಎಂದೇ ಬಿಂಬಿಸ­ಲಾಗಿತ್ತು.  ಅವರ ನಿರ್ಗಮನ ಅಚ್ಚರಿ ಮೂಡಿಸಿದೆ ಎಂದು ಐ.ಟಿ ವಲಯ ಪ್ರತಿಕ್ರಿಯಿಸಿದೆ.

ಗೋಪರಾಜು 1998ರಲ್ಲಿ ಇನ್ಫೊಸಿಸ್‌ ಸೇರಿದ್ದರು. ಅವರು ಕಂಪೆನಿಯ ಪ್ರಯೋಗಾಲಯ, ಸಂಶೋ­ಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯ­ಸ್ಥರಾಗಿ ಕಾರ್ಯ­ನಿರ್ವಹಿಸುತ್ತಿದ್ದರು. ‘ಬಾಲು‘ ಮತ್ತು ‘ಸುಬು’ ರಾಜೀನಾಮೆ ಸಲ್ಲಿಸಿ­ದ್ದಾರೆ. ಅವರ  ಕೊನೆಯ ಕೆಲಸದ ದಿನ ಕ್ರಮವಾಗಿ ಡಿ. 31 ಮತ್ತು ಡಿ. 27 ಎಂದು  ಕಂಪೆನಿ ಮುಂಬೈ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.

ಸ್ವತಂತ್ರ ನಿರ್ದೇಶಕರು
ಈ ನಡುವೆ ಬಯೋಕಾನ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಕಿರಣ್‌ ಮಜುಂದಾರ್‌ ಷಾ ಅವರನ್ನು ಸ್ವತಂತ್ರ ನಿರ್ದೇಶಕರಾ­ಗಿಯೂ, ಯು.ಬಿ. ಪ್ರವೀಣ್‌ ರಾವ್‌ ಅವರನ್ನು  ಪೂರ್ಣಾ ವಧಿ ನಿರ್ದೇಶಕ­ರಾಗಿಯೂ ನೇಮಿಸಿ ಕಂಪೆನಿ ಪ್ರಕಟಣೆ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT