ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರು ಮತದಾರರು: ಶೇ 100 ಮತದಾನ

Last Updated 9 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಇಟಾನಗರ (ಪಿಟಿಐ): ಅರುಣಾಚಲ ಪ್ರದೇಶದ ಅಂಜಾವ್‌ ಜಿಲ್ಲೆಯ ಮಾಲೇ­ಗಾಂವ್‌ ಗ್ರಾಮದ ಮತಗಟ್ಟೆಯೊಂದ­ರಲ್ಲಿ ಕೇವಲ ಇಬ್ಬರು ಮತದಾರರಿದ್ದು, ಬುಧವಾರ ನಡೆದ ಚುನಾವಣೆಯಲ್ಲಿ ಶೇ 100ರಷ್ಟು ಮತದಾನ ದಾಖಲಾಗಿದೆ.
ಇದು ಚೀನಾ ಗಡಿಗೆ ಹತ್ತಿರವಿದ್ದು, ರಾಜ್ಯದ ಅತಿ ಚಿಕ್ಕ ಮತಗಟ್ಟೆ. ಜೊಹೆಲಮ್‌ ತಯೆಂಗ್‌ ಹಾಗೂ ಅವರ ಪತ್ನಿ ಸೊಕೆಲಾ ತಯೆಂಗ್‌ ಇಬ್ಬರೂ ಮತ ಚಲಾಯಿಸಿದ್ದಾರೆ.

‘ಮತದಾನಕ್ಕೆ ಯಾವುದೇ ಅಡ್ಡಿ ಉಂಟಾಗಬಾರದು ಎಂಬ ದೃಷ್ಟಿಯಿಂದ ಭದ್ರತಾ ಸಿಬ್ಬಂದಿ ಹಾಗೂ ಚುನಾವಣಾ­ಧಿಕಾರಿಗಳು ಸೇರಿ ಒಟ್ಟು ಹತ್ತು ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು’ ಎಂದು ಮುಖ್ಯ ಚುನಾವಣಾಧಿಕಾರಿ ಚಂದ್ರಭೂಷಣ್‌ ಕುಮಾರ್‌ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT