ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರು ಮಹಿಳೆಯರು, ಬಾಲಕಿ ನಾಪತ್ತೆ

Last Updated 23 ಜುಲೈ 2012, 9:15 IST
ಅಕ್ಷರ ಗಾತ್ರ

ರಾಯಚೂರು: ಯರಮರಸ್ ರೈಲ್ವೆ ಸಿಬ್ಬಂದಿ ವಸತಿ ಗೃಹದಿಂದ ತಾಯಿ ಮತ್ತು ಮಗು ಕಾಣೆಯಾದ ಘಟನೆ ಈಚೆಗೆ ನಡೆದಿದೆ.

ಪ್ರಶಾಂತಿ ವಿ.ನಾಗೇಶ್ವರಾವ್  ಹಾಗೂ ಈಕೆಯ ಪುತ್ರಿ ಮಣಿ ದೀಪಿಕಾ ಎಂಬುವವರೇ  ಕಾಣೆಯಾದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಣೆಯಾದ ಪ್ರಶಾಂತಿ ನಾಗೇಶ್ವರರಾವ್ ವಯಸ್ಸು 24, ಎಸ್‌ಎಸ್‌ಎಲ್‌ಸಿ ಶಿಕ್ಷಣ ಪಡೆದಿದ್ದಾರೆ. 5ಅಡಿ 5ಇಂಚು ಎತ್ತರ, ತೆಳ್ಳನೆ ದೇಹ, ಗೋಧಿಗೆಂಪು ಬಣ್ಣ ಹೊಂದಿದ್ದಾರೆ. ತೆಲುಗು, ಹಿಂದಿ ಭಾಷೆ ಮಾತನಾಡುತ್ತಾರೆ. ಬಿಳಿ ಪಂಜಾಬಿ ಡ್ರೆಸ್ ಧರಿಸಿದ್ದಾರೆ. ಕೈಯಲ್ಲಿ ಹಸಿರು ಬಳೆ, ಕೊರಳಲ್ಲಿ ಕರಿಮಣಿ ತಾಳಿ ಹಾಕಿಕೊಂಡಿದ್ದಾರೆ ಎಂದು ಕಾಣೆಯಾದ ಮಹಿಳೆಯ ತಂದೆ ರಾಮಾಂಜನೇಯಲು ಅವರ ದೂರಿನ್ವಯ ಪ್ರಕರಣ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

ಅದೇ ರೀತಿ ತಾಲ್ಲೂಕಿನ ಹೆಗ್ಗಸನಹಳ್ಳಿ ಗ್ರಾಮದ ಮಹಿಳೆ ರಾಯಚೂರಿನ ನಗರದ ಮುನ್ನೂರುವಾಡಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವರ್ಗಾವಣೆ ಪತ್ರ ತರಲು ಹೋದ ಮಹಿಳೆ ಕಾಣೆಯಾದ ಘಟನೆ ಈಚೆಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಣೆಯಾದ ಮಹಿಳೆ ಶೈಲಜಾ ರವಿಪಾಟೀಲ್ ಎಂಬುವವರಾಗಿದ್ದಾರೆ. ವಯಸ್ಸು 20 ವರ್ಷ, ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ, ಉದ್ಯೋಗ ಮನೆಗೆಲಸ, 5ಅಡಿ ಎತ್ತರ, ತೆಳ್ಳನೆ ದೇಹ, ಸಾದಾಗೆಂಪು ಬಣ್ಣ, ಉದ್ದ ಮುಖ, ನೀಳವಾದ ಮೂಗು. ಹಸಿರು ಬಣ್ಣದ ಚೂಡಿದಾರ ಧರಿಸಿದ್ದಾರೆ. ಕನ್ನಡ ಭಾಷೆ ಮಾತನಾಡುತ್ತಾರೆ ಎಂದು ಕಾಣೆಯಾದ ಮಹಿಳೆಯ ತಾಯಿ ಬಸಮ್ಮ ಬೂದೆಪ್ಪ ಅವರ ದೂರಿನ್ವಯ ಪ್ರಕರಣವನ್ನು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

ಕಾಣೆಯಾದವರ ಬಗ್ಗೆ ಸುಳಿವು ಕಂಡು ಬಂದಲ್ಲಿ ದೂರವಾಣಿ ಸಂಖ್ಯೆ -08532-235308, ಅಥವಾ ಮೊಬೈಲ್ ಸಂಖ್ಯೆ 94486-33188, 94808-03850 ಪೊಲೀಸ್ ಕಂಟ್ರೋಲ್ ರೂಮ್ 08532-235635 ಮೂಲಕ ಸಂಪರ್ಕಿಸಬಹುದಾಗಿದೆ ಎಂದು  ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT