ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾಕ್: ಆತ್ಮಹತ್ಯಾ ದಾಳಿಗೆ 47 ಬಲಿ

Last Updated 13 ಜುಲೈ 2013, 19:59 IST
ಅಕ್ಷರ ಗಾತ್ರ

ಕಿರ್‌ಕುಕ್ (ಎಎಫ್‌ಪಿ): ಇರಾಕಿನ ಕೆಫೆ ಕೇಂದ್ರವೊಂದರ ಮೇಲೆ ಅಪರಿಚಿತರು ನಡೆಸಿದ ಹಿಂಸಾತ್ಮಕ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 47ಮಂದಿ ಸಾವನ್ನಪ್ಪಿದ್ದಾರೆ.

ರಂಜಾನ್ ಹಿನ್ನೆಲೆಯಲ್ಲಿ ಉಪವಾಸ ನಿರತ ಮುಸ್ಲಿಂ ಬಾಂಧವರು ಶುಕ್ರವಾರ ರಾತ್ರಿ ಕುರ್‌ಕುಕ್ ನಗರದ ಕೆಫೆಯೊಂದರಲ್ಲಿ `ಇಫ್ತಾರ್' (ಸೌಹಾರ್ದ) ಕೂಟ ನಡೆಸುತ್ತಿದ್ದರು.

ಘಟನೆಯಲ್ಲಿ 38 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ  ಉಳಿದವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 9 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಇರಾಕಿನಲ್ಲಿ ಹಿಂಸಾಚಾರ ಮತ್ತು ಆತ್ಮಹತ್ಯಾ ದಾಳಿಗೆ ಈ ವರ್ಷ 2,500 ಮಂದಿ ಬಲಿಯಾಗಿದ್ದಾರೆ. ಜುಲೈ ತಿಂಗಳೊಂದರಲ್ಲೇ ಈತನಕ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT