ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾಕ್: ರೂ 1265 ಕೋಟಿ ಯೋಜನೆ `ಎಸ್‌ಇಪಿಸಿ'ಗೆ

Last Updated 6 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯುತ್, ಪವನ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಯೋಜನೆಗಳ ಭಾರತೀಯ ಕಂಪೆನಿ `ಶ್ರಿರಾಮ್ ಇಪಿಸಿ'(ಎಸ್‌ಇಪಿಸಿ), ಇರಾಕ್‌ನ ಬರ್ಸಾದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ವಲಯಕ್ಕೆ ಸಂಬಂಧಿಸಿದ 23 ಕೋಟಿ ಡಾಲರ್(ಸುಮಾರು ರೂ 1265 ಕೋಟಿ) ಮೊತ್ತದ ಯೋಜನೆಗಳನ್ನು ಜಾರಿಗೊಳಿಸುವ ಕಾಮಗಾರಿ ಪಡೆದುಕೊಂಡಿದೆ.

ರಸ್ತೆ, 240 ಕಿ.ಮೀ. ಪೈಪ್‌ಲೈನ್, ಪಂಪಿಂಗ್ ಸ್ಟೇಷನ್, ಎಂಜಿನಿಯರಿಂಗ್ ಕೆಲಸಗಳನ್ನೊಳಗೊಂಡ ಬೃಹತ್ ಕಾಮಗಾರಿಯನ್ನು `ಮೋಕುಲ್ ಸಮೂಹ'ದ ಜತೆಗೂಡಿ ನಿರ್ವಹಿಸಲಾಗುವುದು ಎಂದು `ಎಸ್‌ಇಪಿಸಿ' ವ್ಯವಸ್ಥಾ ಪಕ ನಿರ್ದೇಶಕ ಟಿ.ಶಿವರಾಮನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT