ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾಕ್‌ನಲ್ಲಿ ಸ್ಫೋಟ: 28 ಸಾವು

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ಬಾಗ್ದಾದ್ (ಎಎಫ್‌ಪಿ): ನಗರದ ಆಸ್ಪತ್ರೆಯೊಂದರ ಬಳಿ ಶುಕ್ರವಾರ ಅಂತ್ಯಸಂಸ್ಕಾರ ಮೆರವಣಿಗೆಯೊಂದು ಸಾಗುತ್ತಿದ್ದಾಗ ಕಾರ್ ಬಾಂಬ್ ಸ್ಫೋಟಿಸಿ 28 ಜನ ಮೃತಪಟ್ಟಿದ್ದಾರೆ.

ಆತ್ಮಾಹುತಿ ದಳಕ್ಕೆ ಸೇರಿದಾತ ಸ್ಫೋಟಕ ಸಾಮಗ್ರಿ ತುಂಬಿದ ಕಾರನ್ನು ಸ್ಫೋಟಿಸಿ ಈ ಕೃತ್ಯ ಎಸಗಿದ್ದಾನೆ ಎಂದು ಒಳಾಡಳಿತ ಸಚಿವಾಲಯದ ಅಧಿಕಾರಿಗಳು ದೃಢಪಡಿಸಿದ್ದಾರೆ.

ರಿಯಲ್ ಎಸ್ಟೇಟ್ ಏಜೆಂಟ್ ಮಹಮ್ಮದ್ ಮಲಿಕಿ, ಆತನ ಪತ್ನಿ ಮತ್ತು ಪುತ್ರನನ್ನು ಕೊಲೆ ಮಾಡಲಾಗಿತ್ತು. ಶವಗಳನ್ನು ಅಂತ್ಯ ಸಂಸ್ಕಾರಕ್ಕೆ ಕೊಂಡೊಯ್ಯುವಾಗ ಸಂಭವಿಸಿದ ಈ ಸ್ಫೋಟದಲ್ಲಿ ಇತರೆ 50 ಜನ ಗಾಯಗೊಂಡಿದ್ದಾರೆ.

ಇರಾಕ್‌ನಲ್ಲಿ ಶಿಯಾಪಂಥ ನೇತೃತ್ವದ ಸರ್ಕಾರ ಮತ್ತು ಪ್ರಮುಖ ಸುನ್ನಿ ಪಂಥದವರ  ಮಧ್ಯೆ ರಾಜಕೀಯ ಬಿಕ್ಕಟ್ಟು ಉದ್ಭವಿಸಿದ್ದು, ಮತೀಯಗಲಭೆಗಳು ಆಗಾಗ ಸಂಭವಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT