ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನಿ ಕಪ್: ಮಿಂಚಿದ ಉಮೇಶ್ ಯಾದವ್

Last Updated 2 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಜೈಪುರ (ಪಿಟಿಐ): ಭಾರತ ಇತರೆ ತಂಡದವರು ಇಲ್ಲಿ ನಡೆಯುತ್ತಿರುವ ಇರಾನಿ ಕಪ್ ಕ್ರಿಕೆಟ್ ಪಂದ್ಯದಲ್ಲಿ ರಾಜಸ್ತಾನದ ವಿರುದ್ಧ ಮೇಲುಗೈ ಸಾಧಿಸಿದ್ದಾರೆ.

ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಎರಡನೇ ದಿನವಾದ ಭಾನುವಾರ ಭಾರತ ಇತರೆ ತನ್ನ ಮೊದಲ ಇನಿಂಗ್ಸ್‌ನಲ್ಲಿ 663 ರನ್ ಪೇರಿಸಿತು. ದಿನದಾಟದ ಅಂತ್ಯಕ್ಕೆ ರಾಜಸ್ತಾನ 22.2 ಓವರ್‌ಗಳಲ್ಲಿ 3 ವಿಕೆಟ್‌ಗೆ 53 ರನ್ ಗಳಿಸಿ ಸಂಕಷ್ಟದಲ್ಲಿ ಸಿಲುಕಿದೆ. ಭಾರತ ಇತರೆ ತಂಡದ ಉಮೇಶ್ ಯಾದವ್ (22ಕ್ಕೆ 2) ಎದುರಾಳಿ ತಂಡಕ್ಕೆ ಆರಂಭಿಕ ಆಘಾತ ನೀಡಿದರು.

ಇದಕ್ಕೂ ಮುನ್ನ ಮೂರು ವಿಕೆಟ್‌ಗೆ 400 ರನ್‌ಗಳಿಂದ ಎರಡನೇ ದಿನದಾಟ ಆರಂಭಿಸಿದ ಭಾರತ ಇತರೆ ಭಾರಿ ಮೊತ್ತ ಕಲೆಹಾಕಿತು. ಶಿಖರ್ ಧವನ್ ಮತ್ತು ಆಜಿಂಕ್ಯ ರಹಾನೆ ಗಳಿಸಿದ ಶತಕ ಅಲ್ಲದೆ, ಮನ್‌ದೀಪ್ ಸಿಂಗ್ (60), ಆರ್. ವಿನಯ್ ಕುಮಾರ್ (43), ವರುಣ್ ಆ್ಯರನ್ (41) ಹಾಗೂ ರಾಹುಲ್ ಶರ್ಮ (52) ಅವರ ಉತ್ತಮ ಬ್ಯಾಟಿಂಗ್ ಇದಕ್ಕೆ ಕಾರಣ. ಮೊದಲ ದಿನ ಅಜೇಯ 117 ರನ್ ಗಳಿಸಿದ್ದ ರಹಾನೆ 152 ರನ್ ಗಳಿಸಿ ಔಟಾದರು.

ಸಂಕ್ಷಿಪ್ತ ಸ್ಕೋರ್: ಭಾರತ ಇತರೆ: ಮೊದಲ ಇನಿಂಗ್ಸ್ 153.4 ಓವರ್‌ಗಳಲ್ಲಿ 663 (ಶಿಖರ್ ಧವನ್ 177, ಆಜಿಂಕ್ಯ ರಹಾನೆ 152, ಪಾರ್ಥಿವ್ ಪಟೇಲ್ 55, ಮನ್‌ದೀಪ್ ಸಿಂಗ್ 60, ಆರ್, ವಿನಯ್ ಕುಮಾರ್ 43, ರಾಹುಲ್ ಶರ್ಮ 52, ಅಂಕಿತ್ ಚೌಧರಿ 125ಕ್ಕೆ 4, ಸುಮಿತ್ ಮಾಥುರ್ 129 ಕ್ಕೆ 3). ರಾಜಸ್ತಾನ: ಮೊದಲ ಇನಿಂಗ್ಸ್ 22.2 ಓವರ್‌ಗಳಲ್ಲಿ 3 ವಿಕೆಟ್‌ಗೆ 53 (ಆಕಾಶ್ ಚೋಪ್ರಾ 20, ಉಮೇಶ್ ಯಾದವ್ 22ಕ್ಕೆ 2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT