ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್ ಬೆದರಿಕೆ ಜಗ್ಗದ ಅಮೆರಿಕ

Last Updated 16 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್/ಟೆಹರಾನ್  (ಪಿಟಿಐ): ಇರಾನ್‌ನ `ಪರಮಾಣು ಶಕ್ತಿ~ ಪ್ರದರ್ಶನವು ತಮ್ಮನ್ನು ಕಿಂಚಿತ್ತೂ ಬಾಧಿಸಿಲ್ಲ ಎಂದಿರುವ ಅಮೆರಿಕ, ಆ ರಾಷ್ಟ್ರದ ಪರಮಾಣು ಪ್ರಗತಿ ಕೇವಲ ಬಡಾಯಿ. ಅಣು ಸ್ಥಾವರಕ್ಕೆ ಇಂಧನದ ಸರಳು ಜೋಡಿಸಿದ ಸಂಭ್ರಮ ಆ ದೇಶಕ್ಕಷ್ಟೇ ಸೀಮಿತ ಎಂದು ಹೇಳಿದೆ.
 
ಈ ಮಧ್ಯೆ `ಪರಮಾಣು ಶಕ್ತಿ~ ಪ್ರದರ್ಶಿಸಿರುವ ಇರಾನ್, ಈಗ ವಿಶ್ವದ ಬಲಾಢ್ಯ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಲು ಉತ್ಸುಕತೆ ತೋರುತ್ತಿದೆ.

`ಬುಧವಾರದ ಘಟನೆಯಿಂದ ತನ್ನ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಉಂಟಾಗಿರುವ ಒತ್ತಡದ ತೀವ್ರತೆ ಮತ್ತು ಹೇರಲಾದ ನಿರ್ಬಂಧಗಳಿಂದ ತಾನು ಜಾಗತಿಕವಾಗಿ ಮೂಲೆಗುಂಪಾಗಬಹುದು ಎಂಬ   ಆತಂಕ ಆ  ರಾಷ್ಟ್ರಕ್ಕೆ ಇರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ~ ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರೆ ವಿಕ್ಟೋರಿಯಾ ನುಲೆಂಡ್ ಸುದ್ದಿಗಾರರಿಗೆ ತಿಳಿಸಿದ್ದಾರೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT