ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್ ಮೇಲೆ ದಾಳಿಗೆ ಇಸ್ರೇಲ್ ಸಿದ್ಧತೆ

Last Updated 17 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಲಂಡನ್ (ಐಎಎನ್‌ಎಸ್): ಇರಾಕ್ ಮರುಭೂಮಿಯಲ್ಲಿ ಸೇನಾ ತಾಲೀಮು ನಡೆಸಿದ ಬಳಿಕ, `ಕ್ರಿಸ್ಮಸ್~ಗೆ ಮುಂಚಿತವಾಗಿ ಇರಾನ್ ವಿರುದ್ಧ ದಾಳಿ ನಡೆಸಲು ಇಸ್ರೇಲ್ ಸಿದ್ಧತೆ ನಡೆಸುತ್ತಿದೆ ಎಂದು ಮಾಧ್ಯಮ ವರದಿ ತಿಳಿಸಿವೆ.

ಇರಾನ್ ಪರಮಾಣು ಕಾರ್ಯಕ್ರಮದ ವಿರುದ್ಧ, ಅದರಲ್ಲೂ ಮುಖ್ಯವಾಗಿ ಪವಿತ್ರ ನಗರ ಕೋಮ್ ಬಳಿಯ ಫೋರ್ಡೊದಲ್ಲಿನ ಯುರೇನಿಯಂ ಭದ್ರಕೋಟೆಯನ್ನು ಗುರಿಯಾಗಿರಿಸಿಕೊಂಡು ಈ ವರ್ಷದ ಅಂತ್ಯದೊಳಗಾಗಿ ದಾಳಿ ನಡೆಸಲು ಇಸ್ರೇಲ್ ಸೇನಾಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು `ಸನ್~ ಪತ್ರಿಕೆ ವರದಿ ಮಾಡಿದೆ.
ಒಂದು ವೇಳೆ ಅಮೆರಿಕ ನೆರವು ನೀಡದಿದ್ದಲ್ಲಿ ಇಸ್ರೇಲ್ ಏಕಾಂಗಿಯಾಗಿ ದಾಳಿ ನಡೆಸಲು ಆ ದೇಶದ ಮುಖಂಡರು ನಿರ್ಧರಿಸಿರುವುದಾಗಿ ಪ್ರಕಟಿಸಿದೆ.

ನವೆಂಬರ್ 6ರಂದು ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ ಕೊನೆಯಲ್ಲಿ ಅಥವಾ ನವೆಂಬರ್ ಮೊದಲ ವಾರದಲ್ಲಿ ದಾಳಿ ನಡೆಸಲು ಜಾಗೃತ ದಳದ ವಿಶ್ಲೇಷಕರು ತಿಳಿಸಿರುವುದಾಗಿಯೂ ವರದಿಗಳು ಹೇಳಿವೆ.

ಪ್ರತಿಭಟನೆ: ಇರಾನ್‌ನ ರಾಷ್ಟ್ರೀಯ  `ಕಡ್ಸ್~ ದಿನಾಚರಣೆ ಪ್ರಯುಕ್ತ ಶುಕ್ರವಾರ ಟೆಹರಾನ್‌ನ ಬೀದಿಗಳಲ್ಲಿ ಜನರು ರ‌್ಯಾಲಿಗಳನ್ನು ನಡೆಸಿ ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಉರಿ ಬಿಸಿಲಿನಲ್ಲೂ ಪ್ಯಾಲೆಸ್ಟೈನ್ ಧ್ವಜ ಮತ್ತು `ಇಸ್ರೇಲ್‌ನ ಅಂತ್ಯ~ಎಂದು ಬರೆದ ಬ್ಯಾನರ್‌ಗಳನ್ನು ಹಿಡಿದು ಅಪಾರ ಜನರು ರ‌್ಯಾಲಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT