ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್‌ಗೆ ಭಾರತದ ವಾಣಿಜ್ಯ ನಿಯೋಗ, ಅಮೆರಿಕ ಸಂಬಂಧಕ್ಕೆ ಧಕ್ಕೆ?

Last Updated 11 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಇರಾನ್‌ಗೆ ವಾಣಿಜ್ಯ ನಿಯೋಗ ಕಳುಹಿಸಲು ಭಾರತವು ಮುಂದಾಗಿರುವುದು ಅಮೆರಿಕದೊಂದಿಗಿನ ಅದರ ಸಂಬಂಧಕ್ಕೆ ಮುಳ್ಳಾಗಿ ಪರಿಣಮಿಸಬಹುದೇ?

ಪರಮಾಣು ಕಾರ್ಯಕ್ರಮಗಳನ್ನು ಕೈಬಿಡುವಂತೆ ಇರಾನ್ ಮೇಲೆ ಗರಿಷ್ಠ ಪ್ರಮಾಣದಲ್ಲಿ ಆರ್ಥಿಕ ಒತ್ತಡ ಹಾಕಲು ಅಮೆರಿಕವು ವಿಶ್ವ ಸಮುದಾಯದ ನೆರವು ಕೇಳುತ್ತಿರುವ ಹೊತ್ತಿನಲ್ಲಿಯೇ ಭಾರತ ಈ ನಿರ್ಧಾರಕ್ಕೆ ಬಂದಿರುವುದು ಇಂಥದ್ದೊಂದು ಅನುಮಾನವನ್ನು ಹುಟ್ಟುಹಾಕಿದೆ.

`ಭಾರತದಿಂದ ಇರಾನ್‌ಗೆ ರಫ್ತು ವಹಿವಾಟು ಉತ್ತೇಜಿಸಲು ಈ ತಿಂಗಳ ಅಂತ್ಯದಲ್ಲಿ ವಾಣಿಜ್ಯ ನಿಯೋಗವೊಂದು ಅಲ್ಲಿಗೆ ತೆರಳಲಿದೆ~ ಎಂದು ಗುರುವಾರ ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲರ್ ಹೇಳಿಕೆ ನೀಡಿದ್ದರು.
ಈ ಹೇಳಿಕೆ ಭಾರತ- ಅಮೆರಿಕ ಸಂಬಂಧಕ್ಕೆ ಹುಳಿ ಹಿಂಡುತ್ತದೆ, ಅಲ್ಲದೇ ಇದೊಂದು ಪ್ರಚೋದನಕಾರಿ ಹೇಳಿಕೆ ಎಂದು ಭಾರತಕ್ಕೆ ಆಪ್ತರಾಗಿರುವ ಕೆಲವರು ವ್ಯಾಖ್ಯಾನಿಸಿದ್ದಾರೆ.

`ಪರಮಾಣು ಸಾಧನೆ~

ಟೆಹರಾನ್ (ಐಎಎನ್‌ಎಸ್): `ಸದ್ಯದಲ್ಲಿಯೇ ದೇಶದ ಬೃಹತ್ ಪರಮಾಣು ಸಾಧನೆ ಹೊರಬೀಳಲಿದೆ~ ಎಂದು ಇಸ್ಲಾಂ ಕ್ರಾಂತಿಯ 33ನೇ ವರ್ಷಾಚರಣೆ ವೇಳೆ ಇರಾನ್ ಅಧ್ಯಕ್ಷ ಮೊಹಮ್ಮದ್ ಅಹ್ಮದಿನೇಜದ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT