ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್‌ನಿಂದ ಯುರೇನಿಯಂ ಸಂವರ್ಧನೆ

Last Updated 8 ಜನವರಿ 2012, 19:30 IST
ಅಕ್ಷರ ಗಾತ್ರ

ಟೆಹರಾನ್ (ಎಪಿ): ವೈಮಾನಿಕ ದಾಳಿಗಳಿಂದ ರಕ್ಷಣೆ ಹೊಂದಿರುವ ಮತ್ತು ನೆಲದಡಿಯಲ್ಲಿ ನಿರ್ಮಿಸಿರುವ ಹೊಸ ಪರಮಾಣು ಸ್ಥಾವರದಲ್ಲಿ ಇರಾನ್ ಸರ್ಕಾರವು ಯುರೇನಿಯಂ ಸಂವರ್ಧನೆ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು  ದಿನ ಪತ್ರಿಕೆಯೊಂದು ವರದಿ ಮಾಡಿದೆ.

ಪವಿತ್ರ ನಗರ `ಕೋಮ್~ನ ಸಮೀಪವಿರುವ ಫೊರ್ಡೊ ಪರಮಾಣು ಘಟಕದಲ್ಲಿ ಸರ್ಕಾರವು ಯುರೇನಿಯಂ ಸಂವರ್ಧನಾ ಯೋಜನೆಗೆ ಚಾಲನೆ ನೀಡಿದೆ ಎಂದು ಇರಾನಿನ ಆಡಳಿತದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ `ಕೇಹಾನ್~ ದಿನಪತ್ರಿಕೆ ಬರೆದಿದೆ.

`ವಿದೇಶಿ ವೈರಿಗಳ ಬೆದರಿಕೆಯ ನಡುವೆಯೂ ಇರಾನ್ ಫೊರ್ಡೊ ಘಟಕದಲ್ಲಿ ಸಂವರ್ಧನ ಪ್ರಕ್ರಿಯೆಯನ್ನು ಆರಂಭಿಸಿರುವ ಸಂಬಂಧ ಪತ್ರಿಕೆಗೆ ಶನಿವಾರ ಮಾಹಿತಿ ಲಭ್ಯವಾಗಿದೆ~ ಎಂದು ಪತ್ರಿಕೆ ವರದಿ ಮಾಡಿದೆ.

ಈ ಪತ್ರಿಕೆಯ ಮ್ಯಾನೇಜರ್ ಒಬ್ಬರು ಇರಾನಿನ ಅತ್ಯುನ್ನತ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆದರೆ, ಇರಾನಿನ ಪರಮಾಣು ಇಂಧನ ಇಲಾಖೆಯ ಮುಖ್ಯಸ್ಥ  ಫೆರೊಡೌನ್ ಅಬ್ಬಾಸಿ ಶನಿವಾರ ವ್ಯತಿರಿಕ್ತ ಹೇಳಿಕೆ ನೀಡಿದ್ದರು.ದೇಶವು ಶೀಘ್ರದಲ್ಲಿ ಫೊರ್ಡೊ ಸ್ಥಾವರದಲ್ಲಿ ಯುರೇನಿಯಂ ಸಂವರ್ಧನೆ ಪ್ರಕ್ರಿಯೆಯನ್ನು ಆರಂಭಿಸಲಿದೆ ಎಂದು ಹೇಳಿದ್ದರು.

ಇರಾನಿನ ಪರಮಾಣು ಕಾರ್ಯಕ್ರಮಗಳಿಗೆ ಅಮೆರಿಕ ಹಾಗೂ ಮೈತ್ರಿ ರಾಷ್ಟ್ರಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತಿವೆ.

ಒಂದು ವೇಳೆ ಇರಾನ್ ಸ್ವತಃ ಪರಮಾಣು ಇಂಧನವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದೇ ಆದರೆ, ನಂತರ ಅದು ಪರಮಾಣು ಅಸ್ತ್ರಗಳನ್ನು ತಯಾರಿಸಬಹುದು ಎಂಬ ಕಳವಳವನ್ನು ಈ ರಾಷ್ಟ್ರಗಳು ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT