ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಾಖಾ ಮಾಹಿತಿ ಕಡ್ಡಾಯ ಬಹಿರಂಗಕ್ಕೆ ಸೂಚನೆ

Last Updated 15 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಪ್ರಾಧಿಕಾರಗಳು ತಮ್ಮ ತಮ್ಮ ಇಲಾಖೆಗೆ ಸಂಬಂಧಿಸಿದ ವಿಷಯಗಳನ್ನು ಕಡ್ಡಾಯವಾಗಿ ಬಹಿರಂಗಗೊಳಿಸಲು ಎಲ್ಲಾ ರಾಜ್ಯಗಳ ಹೈಕೋರ್ಟ್‌ಗಳು ಸೂಚಿಸಬೇಕು ಎಂದು ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಸಲಹೆ ಮಾಡಿದೆ.

ಹೈಕೋರ್ಟ್‌ಗಳು ಮಾದರಿ ಸಂಸ್ಥೆಗಳಾಗಿ ಸಾರ್ವಜನಿಕರಿಂದ ಗುರುತಿಸಲ್ಪಟ್ಟಿದ್ದು, ಕಾನೂನನ್ನು ಅನುಷ್ಠಾನಗೊಳಿಸುವ ಹೊಣೆ ಹೊತ್ತಿದೆ. ಇಂತಹ ಹೈಕೋರ್ಟ್‌ಗಳು ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ) ಕಾಯಿದೆ ಸೆಕ್ಷನ್ 4 (1) (ಬಿ) ಅಡಿಯಲ್ಲಿ ಸರ್ಕಾರದ ವಿವಿಧ ಇಲಾಖೆಗಳು, ಪ್ರಾಧಿಕಾರಗಳು ಕಡ್ಡಾಯವಾಗಿ ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಮೂಲಕ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸಿಐಸಿ ಆಯುಕ್ತ ಸತ್ಯಾನಂದ ಮಿಶ್ರಾ ವಿನಂತಿ ಮಾಡಿದ್ದಾರೆ.

ಸಂಸ್ಥೆಗಳ ಪೂರ್ಣ ಮಾಹಿತಿ, ಯಾವ ಸಂಸ್ಥೆ, ಅದರ ಕರ್ತವ್ಯಗಳೇನು, ಅದರಲ್ಲಿನ ಅಧಿಕಾರಿಗಳ ಮತ್ತು ಸಿಬ್ಬಂದಿ, ಆ ಸಂಸ್ಥೆಗೆ ಒದಗಿಸಿದ ಅನುದಾನದ ಪ್ರಮಾಣ, ಖರ್ಚಿನ ವಿವರ, ಉದ್ದೇಶಿತ ಯೋಜನೆಗಳು ಮತ್ತು ವೆಚ್ಚ, ಯಾವ ಯಾವ ಸಂಸ್ಥೆ/ವ್ಯಕ್ತಿಗಳಿಗೆ ಹಣ ನೀಡಲಾಗಿದೆ ಹಾಗೂ ಇತರ ಮಾಹಿತಿಗಳನ್ನು 120 ದಿನಗಳಲ್ಲಿಯೇ ಕಡ್ಡಾಯವಾಗಿ ಬಹಿರಂಗಗೊಳಿಸುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆಯನ್ನು ತರಲು ಹೈಕೋರ್ಟ್‌ಗಳು ಸೂಚನೆ ನೀಡುವಂತೆ ಆಯೋಗ ಸಲಹೆ ಮಾಡಿದೆ.

ಸಿ.ಜೆ.ಕರೀರಾ ಮತ್ತು ಮಣಿರಾಮ್ ಶರ್ಮಾ ಎನ್ನುವವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಆಯೋಗ, ಗುವಾಹಟಿ ಹೈಕೋರ್ಟ್ ಈ ನಿಟ್ಟಿನಲ್ಲಿ ಮಾದರಿ ಕೆಲಸ ಮಾಡಿದ್ದು, ದೇಶದ ಇತರ ಎಲ್ಲಾ ಹೈಕೋರ್ಟ್‌ಗಳನ್ನು ಅದನ್ನು ಪಾಲನೆ ಮಾಡುವಂತೆಯೂ ಶಿಫಾರಸು ಮಾಡಿದೆ.
 

ಹೈಕೋರ್ಟ್‌ಗಳಿಗೆ ಆಯೋಗ ಸಲಹೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT