ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಿಯಾನಾ ಏರು ಯಾನ!

Last Updated 4 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನಟಿ ಇಲಿಯಾನಾ ಡಿಕ್ರುಜ್ ಇದೀಗ ಬಾಲಿವುಡ್‌ನ ಬೇಡಿಕೆಯ ನಟಿ. `ಬರ್ಫಿ~ ಚಿತ್ರದ ಗೆಲುವು ಅವರಿಗೆ ಅವಕಾಶಗಳನ್ನು ತಂದುಕೊಡುತ್ತಿದೆ. ಮುಂಬೈ ಮೂಲದ ಇಲಿಯಾನಾ ಆರಂಭದಲ್ಲಿ ಬಾಲಿವುಡ್‌ನಲ್ಲಿಯೇ ಅದೃಷ್ಟ ಹುಡುಕಿದವರು.

ನಿರಾಶೆಯಿಂದ ದಕ್ಷಿಣದತ್ತ ಮುಖ ಮಾಡಿದವರು. ಅಲ್ಲಿ ಜನಪ್ರಿಯರಾಗಿ ಬಂದು ಬಾಲಿವುಡ್ ಬಾಗಿಲು ಬಡಿದ ಅವರಿಗೆ ಅದೃಷ್ಟ ಖುಲಾಯಿಸಿದೆ. ಅನುರಾಗ್ ಬಸು ನಿರ್ದೇಶನದ, ರಣಬೀರ್ ಕಪೂರ್-ಪ್ರಿಯಾಂಕಾ ಚೋಪ್ರಾ ಜೊತೆ ಅವರು ನಟಿಸಿದ್ದ `ಬರ್ಫಿ~ ಚಿತ್ರದ ಯಶಸ್ಸು ಅವರ ಅದೃಷ್ಟಕ್ಕೆ ಕಾರಣವಾಗಿದೆ.
 
ಆ ಮಾನದಂಡದಿಂದ ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಸಂತೋಷಿ ಅವರ `ಫಟಾ ಪೋಸ್ಟರ್ ನಿಕ್ಲಾ ಹೀರೋ~ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಶಾಹೀದ್ ಕಪೂರ್ ನಾಯಕ.

`ಈ ಮೊದಲು ನಾಯಕಿ ಪಾತ್ರಕ್ಕೆ `ಕಾಕ್‌ಟೇಲ್~ ಚಿತ್ರದಲ್ಲಿ ನಟಿಸಿದ್ದ ಡಯಾನಾ ಪೆಂಟಿ ಅವರನ್ನು ಆರಿಸಲಾಗಿತ್ತು. ಆಕೆ ಕತೆಯಲ್ಲಿ ಕೆಲವು ಬದಲಾವಣೆಗಳನ್ನು ಬಯಸಿದ ಕಾರಣ ಇಲಿಯಾನಾ ಅವರನ್ನು ಒಪ್ಪಿಸಲಾಯಿತು.

`ಫಟಾ ಪೋಸ್ಟರ್ ನಿಕ್ಲಾ ಹೀರೋ~ ಚಿತ್ರ ನನ್ನ `ಘಾಯಲ್~, `ಅಂದಾಜ್ ಅಪ್ನಾ ಅಪ್ನಾ~, `ಖಾಕಿ~, `ಅಜಬ್ ಪ್ರೇಮ್‌ಕಿ ಘಜಬ್ ಕಹಾನಿ~ ಚಿತ್ರಗಳಂತೆಯೇ ಕುಟುಂಬವೆಲ್ಲಾ  ನೋಡುವಂತಹ ಚಿತ್ರ~ ಎಂದು ಸಂತೋಷಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT