ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಿಯಿಂದ ಹರಡುವ ರೋಗ ಪತ್ತೆಗೆ ಉಪಗ್ರಹ

Last Updated 18 ಫೆಬ್ರುವರಿ 2011, 16:40 IST
ಅಕ್ಷರ ಗಾತ್ರ

ವಾಷಿಂಗ್ಟನ್(ಪಿಟಿಐ): ಇಲಿ-ಹೆಗ್ಗಣಗಳಿಂದ ಹರಡುವ ಮಾರಕ ಪಿಡುಗುಗಳ ಬಗ್ಗೆ ಮೊದಲೇ ಪತ್ತೆಮಾಡಿ ಮುನ್ನೆಚ್ಚರಿಕೆ ನೀಡಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ದ ಕೃತಕ ಉಪಗ್ರಹ ನೆರವಾಗಲಿದೆ.

ಅಮೆರಿಕದ ಉಟಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಉಪಗ್ರಹ ರವಾನಿಸುವ ಚಿತ್ರಗಳಲ್ಲಿ ದಾಖಲಾಗುವ ಕಾಡು ಮತ್ತಿತರ ಹಸಿರು ಪ್ರದೇಶದ ಏರಿಕೆ ಮತ್ತು ಇಳಿಕೆಯ (ಸಮೃದ್ಧಿ-ಬರಗಾಲ) ಅಧ್ಯಯನದಿಂದ ಮೂಷಿಕ ವರ್ಗಗಳಿಂದ ಹರಡುವ ರೋಗಗಳನ್ನೂ ಪತ್ತೆ ಮಾಡಬಹುದು ಎಂದು ತಿಳಿಸಿದ್ದಾರೆ.

ಕೇವಲ ಇಲಿ-ಹೆಗ್ಗಣಗಳಿಗೆ ಮಾತ್ರ ಇದು ಸೀಮಿತ ಅಲ್ಲ. ಇತರ ಪ್ರಾಣಿಗಳ ವಂಶವೃದ್ಧಿಯ ಬಗ್ಗೆಯ ಮಾಹಿತಿಗೂ ಈ ವಿಧಾನವನ್ನು ಅನುಸರಿಸಬಹುದು ಎಂದು  ಸಮೀಕ್ಷಾ ವರದಿಯ ಸಹ ಸಂಪಾದಕ ಡೆನಿಸ್ ಡೇರಿಂಗ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT