ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ನಾಟಕ ಕಲಿಯಿರಿ

Last Updated 15 ಜುಲೈ 2012, 19:30 IST
ಅಕ್ಷರ ಗಾತ್ರ

* ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಹೆಗ್ಗೋಡಿನ ನೀನಾಸಂ (ನೀಲಕಂಠೇಶ್ವರ ನಾಟ್ಯ ಸಂಘ), ರಂಗಭೂಮಿ ಕುರಿತು ಒಂದು ವರ್ಷದ ಡಿಪ್ಲೊಮಾ ಕೋರ್ಸ್ ನಡೆಸುತ್ತದೆ. ಬೆಳಿಗ್ಗೆ ಆರು ಗಂಟೆಯಿಂದ ರಾತ್ರಿ ಒಂಬತ್ತು ಗಂಟೆಯವರೆಗೆ ರಂಗಭೂಮಿ ಕುರಿತು ತರಬೇತಿ, ಉಪನ್ಯಾಸ, ಪ್ರಾತ್ಯಕ್ಷಿಕೆ ಮೊದಲಾದವು ಇರುತ್ತವೆ.

ತರಬೇತಿ ಅವಧಿಯಲ್ಲಿ ಹಬ್ಬದ ರಜೆ ಇರುವುದಿಲ್ಲ. ಕೋರ್ಸ್ ನಂತರ ಪ್ರಮಾಣಪತ್ರ ನೀಡಲಾಗುತ್ತದೆ. ಆಗಾಗ ತಜ್ಞರ ಉಪನ್ಯಾಸ, ನಾಟಕ ಪ್ರಯೋಗವೂ ಇರುತ್ತದೆ. ಮುಖ್ಯಸ್ಥರು  ಕೆ.ವಿ. ಅಕ್ಷರ.
ಮಾಹಿತಿಗೆ www.ninasam.org,
08183 265646 

* ರಂಗ ಶಿಕ್ಷಣ ನೀಡುವ ಇನ್ನೊಂದು ಪ್ರಮುಖ ಸಂಸ್ಥೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಸಾಣೇಹಳ್ಳಿ ಮಠದ ಶಿವಕುಮಾರ ರಂಗ ಪ್ರಯೋಗ ಶಾಲೆ. ನಟರಾಜ ಹೊನ್ನವಳ್ಳಿ ಇಲ್ಲಿ ಪ್ರಾಚಾರ್ಯರಾಗಿದ್ದು 20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ಊಟ ಹಾಗೂ ವಸತಿ ಉಚಿತ.
 
ಯೋಗ, ಕಂಸಾಳೆ, ಯಕ್ಷಗಾನ, ಗಮಕ, ಪ್ರಸಾಧನ ಅಲ್ಲದೇ ಕನ್ನಡ ಸಾಹಿತ್ಯವನ್ನು ನಾಡಿನ ತಜ್ಞರಿಂದ ಪರಿಚಯಿಸಲಾಗುತ್ತದೆ. ಜನಪದ ಕಲೆಗಳನ್ನು ಪರಿಚಯಿಸುವುದರ ಜೊತೆಗೆ ಅವುಗಳಲ್ಲಿ ಅಭಿನಯವನ್ನು ಆಧುನಿಕ ಚೌಕಟ್ಟಿನಲ್ಲಿ ಕಲಿಸಲಾಗುತ್ತದೆ. ತರಬೇತಿ ನಂತರ `ಶಿವಸಂಚಾರ~ ತಿರುಗಾಟದಲ್ಲಿ ಅವಕಾಶ ನೀಡಲಾಗುತ್ತದೆ.
ಮಾಹಿತಿಗೆ 08199- 243772, 94482 53488.

* ಚಿತ್ರದುರ್ಗದ ಬೃಹನ್ಮಠದ ಜಮುರಾ ಕಲಾ ಲೋಕ `ಸುತ್ತಾಟ~ ನಡೆಸುತ್ತದೆ. 20 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ತರಬೇತಿ ನೀಡಿದ ನಂತರ ತಿರುಗಾಟ ಕೈಗೊಳ್ಳಲಾಗುತ್ತದೆ. ಮಾಹಿತಿಗೆ ಸಂಚಾಲಕ ಪರಮಶಿವಯ್ಯ ಅವರ ಮೊಬೈಲ್ 94482 32966.

* ಉಡುಪಿ ಜಿಲ್ಲೆ ಕುಂದಾಪುರದ ಭಂಡಾರಕರ್ಸ್‌ ಕಾಲೇಜಿನ ರಂಗ ಅಧ್ಯಯನ ಕೇಂದ್ರ ಒಂದು ವರ್ಷದ ಡಿಪ್ಲೊಮಾ ಕೋರ್ಸ್ ಅವಧಿಯಲ್ಲಿ ರಂಗಭೂಮಿಯ ವಿವಿಧ ಆಯಾಮಗಳನ್ನು ಕಲಿಸುತ್ತದೆ. ಎಸ್‌ಎಸ್‌ಎಲ್‌ಸಿ ಓದಿದ್ದರೆ ಸಾಕು. ರಂಗಾಸಕ್ತಿ ಇರಬೇಕು. ಇದಕ್ಕೆ ಹಂಪಿ ಕನ್ನಡ ವಿವಿ ಮಾನ್ಯತೆಯಿದ್ದು 15 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಊಟ ಹಾಗೂ ವಸತಿ ಉಚಿತ.
 
ಜೊತೆಗೆ ಒಂದು ಸಾವಿರ ರೂಪಾಯಿಯ ಗೌರವಧನ ನೀಡಲಾಗುತ್ತದೆ. ಒಂದು ವರ್ಷದ ಅವಧಿಯಲ್ಲಿ ನಾಲ್ಕು ನಾಟಕಗಳನ್ನು ಅಭ್ಯರ್ಥಿಗಳು ಪ್ರದರ್ಶಿಸಬೇಕು. ಮಾಹಿತಿಗೆ ವಸಂತ ಬನ್ನಾಡಿ ಅವರ ಸಂಪರ್ಕ ಸಂಖ್ಯೆ 94491 05052.

* ದೆಹಲಿಯ ಎನ್‌ಎಸ್‌ಡಿ (ರಾಷ್ಟ್ರೀಯ ನಾಟಕ ಶಾಲೆ) ಯಲ್ಲಿ ಮೂರು ವರ್ಷಗಳ ರಂಗಭೂಮಿ ತರಬೇತಿ ನೀಡಲಾಗುತ್ತದೆ. ಪದವಿ ಪಡೆದವರಿಗೆ ಆದ್ಯತೆ, ಜೊತೆಗೆ ಹಿಂದಿ ಮಾತನಾಡಲು ಬರಬೇಕು. ಮಾಹಿತಿಗೆ 011- 2338 7137.

ಹೀಗೆ ನಾಟಕ ತರಬೇತಿ ಪಡೆದ ನಂತರ ಪೂರ್ಣಾವಧಿ ರಂಗಭೂಮಿಯಲ್ಲಿ ತೊಡಗಿಕೊಳ್ಳಬಹುದು. ಶಾಲೆ, ಕಾಲೇಜುಗಳಲ್ಲಿ ನಾಟಕ ಆಡಿಸುತ್ತ, ಬೇಸಿಗೆ ಶಿಬಿರಗಳನ್ನು ಆಯೋಜಿಸುತ್ತ, ಜೊತೆಗೆ ನಾಟಕ ಶಿಕ್ಷಕರಾಗಿ ಶಾಲೆಗಳಲ್ಲಿ ನೌಕರಿ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT