ಮುಂಬೈ (ಪಿಟಿಐ): ಡಾಲರ್ ಎದುರು ಸ್ಥಿರಗೊಳ್ಳುತ್ತಿರುವ ರೂಪಾಯಿ ವಿನಿಮಯ ಮೌಲ್ಯ, ಷೇರುಪೇಟೆಗಳಲ್ಲಿನ ಚೇತರಿಕೆ ಇತ್ಯಾದಿ ಕಾರಣಗಳಿಂದ ಚಿನ್ನದ ಧಾರಣೆ ಕಳೆದ ಮೂರು ವಾರಗಳಿಂದ ಇಳಿಕೆ ಕಾಣುತ್ತಿದೆ.
ಶನಿವಾರ ಇಲ್ಲಿ 99.5 ಶುದ್ಧತೆಯ 10 ಗ್ರಾಂ ಸ್ಟಾಂಡರ್ಡ್ ಚಿನ್ನದ ಬೆಲೆ ರೂ30,940ಕ್ಕೆ ಇಳಿಕೆ ಕಂಡಿದೆ. ಇದು ಒಂದು ತಿಂಗಳ ಹಿಂದಿನ ದರ. ಬೆಳ್ಳಿ ಧಾರಣೆ ಕೆ.ಜಿಗೆ ರೂ260 ಕುಸಿದಿದ್ದು, ರೂ61,500ರಷ್ಟಾಗಿದೆ.