ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಇವ ಬಸವಣ್ಣ' ಚಿತ್ರೀಕರಣ ನಿಷೇಧಕ್ಕೆ ಸಂಘಟನೆಗಳ ಆಗ್ರಹ

Last Updated 17 ಜುಲೈ 2013, 6:04 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ನಿರ್ಮಾಪಕ ಶ್ರೀನಿವಾಸರಾಜು ಅವರು ನಿರ್ಮಿಸಲು ಮುಂದಾದ `ಇವ ಬಸವಣ್ಣ' ಚಲನಚಿತ್ರದಲ್ಲಿ  ಬಸವಣ್ಣನವರಿಗೆ ಅಪಮಾನ ಮಾಡುವ ರೀತಿಯಲ್ಲಿ ನಟ ಉಪೇಂದ್ರ ಅವರಿಗೆ ವಸ್ತ್ರ ವಿನ್ಯಾಸ ಮಾಡಿರುವುದನ್ನು  ಇಲ್ಲಿಯ ವಿವಿಧ ಸಂಘಟನೆಯವರು ಖಂಡಿಸಿದ್ದಾರೆ.

ಈ ಕುರಿತು ಜಂಟಿ ಪ್ರಕಟಣೆ ನೀಡಿರುವ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಪ್ರದಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಲ.ರು.ಗೊಳಸಂಗಿ, ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಸಿ.ಎಂ.ಮೇಟಿ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು  ಚಲನಚಿತ್ರ ಚಿತ್ರಿಕರಣಕೊಳ್ಳದಂತೆ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ. 

ಬಸವಣ್ಣನವರ  ವೇಷ ಧರಿಸಿದ ಉಪೇಂದ್ರ ಅವರು ಕೊರಳಲ್ಲಿ ಲಿಂಗ ಹಾಗೂ ಜನಿವಾರ ಧರಿಸಿ ಕೈಯಲ್ಲಿ ಖಡ್ಗ ಹಿಡಿದು ಎಲ್ಲವನ್ನು ಸರ್ವನಾಶ ಮಾಡುವ ಕೋಪಾಗ್ನಿ ಸನ್ನಿವೇಶವು ಕೆಲ ಪತ್ರಿಕೆಗಳ ಜಾಹಿರಾತಿನಲ್ಲಿ ಪ್ರಕಟಗೊಂಡಿದೆ. ಈ ಸನ್ನಿವೇಶವು ಬಸವಣ್ಣನವರ ಅಭಿಮಾನಿಗಳಿಗೆ ನೋವನ್ನುಂಟುಮಾಡಿದೆ.

ಚಲನಚಿತ್ರವು ಚಿತ್ರಿಕರಣಗೊಳ್ಳದಂತೆ ನಿಷೇಧಿಸುವಂತೆ ಸರಕಾರಕ್ಕೆ ಒತ್ತಾಯಿಸಲು ಪೂರ್ವಭಾವಿಯಾಗಿ ಜುಲೈ 18 ರಂದು ಸಂಜೆ 4ಕ್ಕೆ ಸ್ಥಳೀಯ ವಿರಕ್ತಮಠದಲ್ಲಿ ಸಿದ್ಧಲಿಂಗದೇವರು ಅವರ ನೇತೃತ್ವದಲ್ಲಿ  ಪಟ್ಟಣದ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT