ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರ ಕುಟುಂಬದ ಭದ್ರತೆ ಯಾರಿಗ್ಬೇಕು?

Last Updated 7 ಫೆಬ್ರುವರಿ 2012, 8:50 IST
ಅಕ್ಷರ ಗಾತ್ರ

ಭಾಲ್ಕಿ: ಹೊರಗೆ ಸಣ್ಣ ಸಪ್ಪಳವಾದರೂ ಸಾಕು. ನಮಗೆ ಮೊದಲು ನೆನಪಾಗುವದು ಪೊಲೀಸರು. ಆದರೆ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುತ್ತಿರುವ ಪೊಲೀಸರ ಕುಟುಂಬಗಳಿಗೆ ಅಭದ್ರತೆ ಕಾಡುತ್ತಿದೆ.

ಭಾಲ್ಕಿಯಲ್ಲಿ 6 ದಶಕಗಳ ಮೊದಲು ನಿರ್ಮಿಸಲ್ಪಟ್ಟಿರುವ ಪೊಲೀಸರ ವಸತಿನಿಲಯಗಳಲ್ಲಿ ವಾಸಿಸುತ್ತಿರುವ ಸುಮಾರು 42 ಕುಟುಂಬಗಳಿಗೆ ಈಗ ದಿನನಿತ್ಯವೂ ನರಕ ಯಾತನೆ ಅನುಭವಿಸುವಂತಾಗಿದೆ. ಹೆಚ್ಚು ಕಡಿಮೆ ನೆಲಸಮದಲ್ಲೇ ಇರುವ ಈ ಮನೆಗಳಿಗೆ ಕಂಪೌಂಡ್ ಇಲ್ಲದರಿಂದ ಹಾಡು ಹಗಲಲ್ಲೇ ವಿಷ ಜಂತುಗಳು ನಿರಾತಂಕವಾಗಿ ಹಾಯುತ್ತವೆ.

ಪೊಲೀಸರ ಮಕ್ಕಳು ಮನೆ ಮುಂದೆ ಓದಲು ಕುಂತರೆ ಇವರ ಸುತ್ತಲೂ ಹಂದಿಗಳು ಅಲೆದಾಡುತ್ತವೆ. ಚರಂಡಿ ವ್ಯವಸ್ಥೆ ಇಲ್ಲದಿರುವ ಕಾರಣ ಸುತ್ತಲೂ ಹೊಲಸು ರಾಚುತ್ತದೆ. ಅಷ್ಟೇ ಅಲ್ಲ. ಊರಿನಲ್ಲಿ ಸತ್ತ ಪ್ರಾಣಿಗಳನ್ನು, ಚರಂಡಿಗಳ ಹೊಲಸನ್ನು ಈ ಪೊಲೀಸ್ ವಸತಿ ನಿಲಯಗಳ ಹಿಂದೆ ಹಾಕಲಾಗುತ್ತದೆ. ಇದರಿಂದ ಇಲ್ಲಿನವರಿಗೆ ಅಸಹನೀಯ ವೇದನೆ ಅನುಭವಿಸುವದು ಅನಿವಾರ್ಯ ಎಂಬಂತಾಗಿದೆ.

ಮನೆಗಳ ಅವ್ಯವಸ್ಥೆ ಶೋಚನೀಯ: ಪೊಲೀಸರ ಮನೆಗಳ ಮೇಲಿನ ಛಾವಣಿ ಶಕ್ತಿಹೀನವಾಗಿವೆ. ಸಿಮೆಂಟಿನ ಮಣ್ಣು ಉದುರುತ್ತಿದೆ. ಒಳಗಿನ ತುಕ್ಕು ಹಿಡಿದಿರುವ ಸರಳುಗಳು ಕಾಣಿಸುತ್ತಿವೆ. ಕಿಟಕಿ ಬಾಗಿಲುಗಳು ಶಿಥಿಲಗೊಂಡಿವೆ. ಶೌಚಾಲಗಳಿಗಂತೂ ಕಿಟಕಿಗಳೇ ಇಲ್ಲ. ಇಷ್ಟೆಲ್ಲಾ ಸಂಕಟವಿದ್ದರೂ ಪೊಲೀಸರು ಚಕಾರವೆತ್ತಲ್ಲ. ಯಾಕೆಂದ್ರೆ ಅವರಿಗೆ ಪ್ರತಿಭಟಿಸುವ ಹಕ್ಕಿಲ್ಲ. ಅಲ್ವೆ?

ಹಾಗಂತ ಅವರೂ ಮನುಷ್ಯರೇ ಎಂಬುದನ್ನು ಇಲಾಖೆಯ ಮೇಲಾಧಿಕಾರಿಗಳು ಅರಿತುಕೊಳ್ಳಬೇಕು. ಇವರೂ ಕೂಡ ಮತವನ್ನು ಚಲಾಯಿಸುತ್ತಾರೆ. ಅವರ ಕಾಳಜಿ ಮಾಡಬೇಕಾದ ಜನಪ್ರತಿನಿಧಿಗಳು ಮೌನ ವಹಿಸದೇ ಪೊಲೀಸರ ಕುಟುಂಬಗಳ ಕಾಳಜಿ ಅವಹಿಸಲಿ.

ಪೊಲೀಸರ ಈ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳ ವಿಸ್ತರಣೆ ಆಗಲಿ ಎಂಬುದು ಪಟ್ಟಣದ ಪ್ರಜ್ಞಾವಂತರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT