ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಇವಾ' ತಂತ್ರಜ್ಞಾನದ ಪ್ರಥಮ ಮಗು ಜನನ

Last Updated 2 ಜೂನ್ 2013, 19:59 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ವಿಶ್ವದ ಪ್ರಥಮ `ಇವಾ'  (ಭ್ರೂಣದ ಬದುಕು ನಿರ್ಧರಿಸುವಿಕೆ) ತಂತ್ರಜ್ಞಾನದ ಮಗು ಇಂಗ್ಲೆಂಡಿನಲ್ಲಿ ಜನಿಸಿದೆ.
ಇಂಗ್ಲೆಂಡ್‌ನ ಲಿವರ್‌ಪೂಲ್ ಆಸ್ಪತ್ರೆಯಲ್ಲಿ 42 ವರ್ಷದ ಮನಃಶಾಸ್ತ್ರಜ್ಞೆ ರುಥ್ ಕಾರ್ಟರ್ ವಿಶ್ವದ ಪ್ರಥಮ ಐವಿಎಫ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ- ಮಗು ಆರೋಗ್ಯವಾಗಿದ್ದಾರೆ.

`ಇವಾ' ತಂತ್ರಜ್ಞಾನದಿಂದಾಗಿ ಜನಿಸಿದ ಮೊದಲ ಮಗು ಇದಾಗಿದೆ. ಈ ತಂತ್ರಜ್ಞಾನದಲ್ಲಿ ಐವಿಎಫ್ (ಪ್ರನಾಳೀಯ ಫಲೀಕರಣ) ಟೈಮ್‌ಲ್ಯಾಪ್ಸ್ ಫೋಟೊಗ್ರಫಿ  ತಂತ್ರವು ಸಮರ್ಥ ಭ್ರೂಣವನ್ನು ಪತ್ತೆ ಹಚ್ಚುತ್ತದೆ. ಈ ತಂತ್ರದ ಮೂಲಕ ಭ್ರೂಣದ ಬೆಳವಣಿಗೆ ಮತ್ತು ಯಾವ ಭ್ರೂಣ ಫಲೀಕರಣವಾಗಿ ಮಗು ಯಶಸ್ವಿಯಾಗಿ ಜನಿಸುತ್ತದೆ ಎಂಬುದನ್ನು ಅಲ್ಪಾವಧಿಯಲ್ಲಿ ಪತ್ತೆ ಹಚ್ಚಬಹುದು.

ಬೆಳವಣಿಗೆ ಹೊಂದುತ್ತಿರುವ ಭ್ರೂಣದ ಸಾವಿರಾರು ಫೋಟೊ ತೆಗೆಯುವ ಐವಿಎಫ್, ನಂತರ ಅದರಲ್ಲಿ ಯಾವ ಹಂತದ ಭ್ರೂಣ ಸಮರ್ಥವಾಗಿ ಹಾಗೂ ಯಶಸ್ವಿಯಾಗಿ ಗರ್ಭಕಟ್ಟಿ ಮಗು ಜನಿಸಲು ಸಾಧ್ಯವಾಗುತ್ತದೆ ಎಂಬುದನ್ನು ನಿಖರವಾಗಿ ತಿಳಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಪ್ರನಾಳೀಯ ಫಲೀಕರಣಕ್ಕೆ ಸಂಬಂಧಿಸಿದಂತೆ ವಿಜ್ಞಾನಿಗಳು ಅನೇಕ ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದಾರೆ. ಈಗ ಈ ಸಂಶೋಧನೆ ಯಶಸ್ವಿಯಾಗಿದ್ದು, ಪದೇಪದೇ ಗರ್ಭಪಾತಕ್ಕೆ ಒಳಗಾಗುವ ಮಹಿಳೆಯರಿಗೆ ಈ ತಂತ್ರಜ್ಞಾನ ವರವಾಗುತ್ತದೆಂದು ಹೇಳಲಾಗುತ್ತಿದೆ.

`ಹಲವು ವರ್ಷಗಳಿಂದ ನಾನು ಮತ್ತು ನನ್ನ ಪತಿ ಮಗುವಿಗಾಗಿ ಪ್ರಯತ್ನ ಪಡುತ್ತಿದ್ದೆವು. ಇನ್ನೇನು ಗರ್ಭ ನಿಂತು ನಾನು ಗರ್ಭಿಣಿಯಾದೆ ಅನ್ನುವಷ್ಟರಲ್ಲೇ ಪದೇಪದೇ ಗರ್ಭಪಾತ ಆಗುತ್ತಿತ್ತು. ಆದರೆ, ಐವಿಎಫ್ ತಂತ್ರದಿಂದ ಈಗ ತಾಯಿಯಾಗಿದ್ದೇನೆ' ಎಂದು ಪ್ರಥಮ `ಇವಾ' ಮಗುವಿನ ತಾಯಿ ಕಾರ್ಟರ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT