ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್ ವಸಾಹತು ವಿರೋಧಿ ಠರಾವು ವಜಾ

Last Updated 19 ಫೆಬ್ರುವರಿ 2011, 17:25 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಡಿಪಿಎ): ಮಧ್ಯಪ್ರಾಚ್ಯದಲ್ಲಿರುವ ಇಸ್ರೇಲ್ ವಸಾಹತನ್ನು ‘ಕಾನೂನು ಬಾಹಿರ’ ಎಂದು ಘೋಷಿಸಬೇಕು ಎಂದು ಅರಬ್ ಹಾಗೂ ಇತರ ಮುಸ್ಲಿಂ ದೇಶಗಳು ವಿಶ್ವಸಂಸ್ಥೆ ಭದ್ರತಾ ಸಮಿತಿಯ ಮುಂದಿಟ್ಟಿದ್ದ ಬೇಡಿಕೆಯನ್ನು ಅಮೆರಿಕ ತನ್ನ ವಿಶೇಷ ‘ವೀಟೊ’ ಅಧಿಕಾರ ಬಳಸಿ ಅನೂರ್ಜಿತಗೊಳಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಕಾಯಂ ಸದಸ್ಯ ರಾಷ್ಟ್ರಗಳಾದ ಅಮೆರಿಕ, ರಷ್ಯ, ಫ್ರಾನ್ಸ್, ಬ್ರಿಟನ್ ಹಾಗೂ ಚೀನಾಗಳಿಗೆ ಇಂತಹ ಯಾವುದೇ ಪ್ರಸ್ತಾವವನ್ನು ತಿರಸ್ಕರಿಸುವ ವಿಶೇಷ ‘ವೀಟೊ’ ಮತ ಚಲಾಯಿಸುವ ಹಕ್ಕಿದೆ. ಅರಬ್- ಮುಸ್ಲಿಂ ದೇಶಗಳು ಮುಂದಿಟ್ಟಿದ್ದ ಈ ಮಹತ್ವದ ಬೇಡಿಕೆಯ ಠರಾವಿನ ವಿರುದ್ಧ ಅಮೆರಿಕದ ರಾಯಭಾರಿ ಸುಸಾನ್ ರೈಸ್ ಅವರು ಕೈ ಎತ್ತುವ ಮೂಲಕ ವೀಟೊ ಚಲಾಯಿಸಿದ್ದರು.

ಆದರೆ ಈ ಕ್ರಮದಿಂದ ಅಮೆರಿಕವು ‘ಇಸ್ರೇಲ್ ವಸಾಹತುಗಳ ಪರ’ ಎಂದು ಭಾವಿಸಬೇಕಿಲ್ಲ ಎಂದು ರೈಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಸ್ರೇಲ್ ವಸಾಹತು ವಿರೋಧಿ ಠರಾವನ್ನು ಬೆಂಬಲಿಸಿ ಯೂರೋಪ್ ರಾಷ್ಟ್ರಗಳು ಸೇರಿದಂತೆ 130 ದೇಶಗಳು ಸಹಿ ಹಾಕಿದ್ದವು. ಪೂರ್ವ ಜೆರುಸಲೇಂ ಒಳಗೊಂಡು ಪ್ಯಾಲೆಸ್ಟೀನ್ ವ್ಯಾಪ್ತಿಯಲ್ಲಿ ಇಸ್ರೇಲ್ ವಸಾಹತು 1967ರಿಂದ ಸಕ್ರಿಯವಾಗಿದೆ.

ಈ ವಸಾಹತು ಕಾನೂನು ಬಾಹಿರವಾಗಿದ್ದು, ಶಾಂತಿ ಸ್ಥಾಪನೆಗೆ ಅಡ್ಡಿಯಾಗಿದೆ. ಹಾಗಾಗಿ ಇದನ್ನು ಕಾನೂನು ಬಾಹಿರ ಎಂದು ಪರಿಗಣಿಸಿ ಸೇನಾ ಕ್ರಮಕ್ಕೆ ಗುರಿಪಡಿಸಬೇಕು ಎಂದು ಈ ದೇಶಗಳು ಒತ್ತಾಯಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT