ಇಸ್ರೋ ಉಡಾವಣೆ ಮಾಡಿದ ಮೊದಲ ಉಪಗ್ರಹ ಯಾವುದು?
ಇಸ್ರೋ ಅಭಿವೃದ್ಧಿಪಡಿಸಿದ ಮೊದಲ ಉಪಗ್ರಹದ ಹೆಸರು ಆರ್ಯಭಟ. ಸೋವಿಯತ್ ಯೂನಿಯನ್ ಅದನ್ನು ಏಪ್ರಿಲ್ 9, 1975ರಲ್ಲಿ ರಷ್ಯಾದ ವೋಲ್ಗೋಗ್ರ್ಯಾಡ್ ಲಾಂಚ್ ಸ್ಟೇಷನ್ನಲ್ಲಿ ಉಡಾವಣೆ ಮಾಡಿತು. ಅದಾದ ಐದು ವರ್ಷಗಳ ನಂತರ ರೋಹಿಣಿ ಸರಣಿಯ ಪ್ರಾಯೋಗಿಕ ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಿತು. ಅದಕ್ಕಾಗಿ ತನ್ನದೇ ಗಗನನೌಕೆ ಬಳಸಿದ್ದು ವಿಶೇಷ. ಅದರ ಹೆಸರು ಎಸ್ಎಲ್ವಿ-3. ಆಂಧ್ರದ ಶ್ರೀಹರಿಕೋಟಾದಲ್ಲಿ ಉಡಾವಣೆ ಮಾಡಲಾಯಿತು.
ಇಸ್ರೋದ ಪ್ರಮುಖ ಸಾಧನೆಗಳು ಯಾವುವು?
ಅದು ತನ್ನದೇ ಗಗನನೌಕೆಗಳು ಹಾಗೂ ಉಪಗ್ರಹಗಳನ್ನು ಅಭಿವೃದ್ಧಿಪಡಿಸಿತು. 2008ರಲ್ಲಿ ಅದು `ಚಂದ್ರಯಾನ-1' ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಅದಲ್ಲದೆ ಮುಂದಿನ ದಿನಗಳಲ್ಲಿ `ಚಂದ್ರಯಾನ-2' ಹಾಗೂ ಮಂಗಳ, ಶುಕ್ರ ಗ್ರಹಗಳಿಗೆ ಮಾನವರಹಿತ ಗಗನನೌಕೆಗಳನ್ನು ಉಡಾವಣೆ ಮಾಡುವ ಯೋಜನೆಗಳನ್ನೂ ಇಸ್ರೋ ಹಾಕಿಕೊಂಡಿದೆ.