ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಶಾಲೆಗಳಿಗೆ ಪರಿಹಾರವಿಲ್ಲವೇ?

Last Updated 3 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಶಿಕ್ಷಣ ಇಲಾಖೆಯು ಮೂರು ಸಾವಿರಕ್ಕಿಂತ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ ತರಾತುರಿಯಲ್ಲಿ ಇರುವಂತಿದೆ. ಈ ಶಾಲೆಗಳಲ್ಲಿ ಹಾಜರಾತಿ ಸಂಖ್ಯೆ 10 ಕ್ಕಿಂತ ಕಡಿಮೆಯಂತೆ. ಹಿಂದೆ ಮಕ್ಕಳ ಸಂಖ್ಯೆ ಸಾಕಷ್ಟಿದ್ದದ್ದರಿಂದಲೇ ಈ ಎಲ್ಲ ಶಾಲೆಗಳನ್ನು ತೆರೆದದ್ದು ಎಂದಾಗ, ಶಾಲೆಗೆ ಹೋಗುವ ವಯಸ್ಸಿನ ಮಕ್ಕಳ ಸಂಖ್ಯೆ ಕಡಿಮೆಯಾಯಿತೆಂದರೆ ಅಚ್ಚರಿ.

ಅಂತಹ ಪರಿಸ್ಥಿತಿ ಸೃಷ್ಟಿಯಾದುದಾದರೂ ಹೇಗೆ? ಕಳೆದ ಐದಾರು ವರ್ಷಗಳಿಂದ ಜನನ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗಿರಬಹುದೇ? ತಮ್ಮ ಮಕ್ಕಳು ಇಂಗ್ಲಿಷ್ ಕಲಿಯಲೆಂಬ ಹಂಬಲ ತಂದೆ-ತಾಯಿಯರದ್ದಾದ ಕಾರಣ ಸರ್ಕಾರಿ ಶಾಲೆಗಳತ್ತ ನೋಡುವವರಿಲ್ಲದ ಪರಿಸ್ಥಿತಿಯೂ ಇರಬಹುದೇ!

ಹೌದಾದರೆ, ಸರ್ಕಾರಿ ಶಾಲೆಗಳಿಗೆ ಎರವಾಗುವ ಖಾಸಗಿ ಶಾಲೆಗಳಿಗೆ ಅನುಮತಿ ನೀಡಿದ್ದೇಕೆ? ಅಥವಾ ಈ ಸರ್ಕಾರಿ ಶಾಲೆಗಳು ಬಡತನದ ರೇಖೆಯನ್ನೂ ಮುಟ್ಟಲಾರದಂಥ ಸ್ಥಿತಿಯಲ್ಲಿರುವುವೇ? ಅಥವಾ, ಉಪಾಧ್ಯಾಯರಿಲ್ಲದೆ ಇವನ್ನು ಮುಚ್ಚಬೇಕಾಗಿ ಬಂದಿದೆಯೇ? ಅಥವಾ, ಸರ್ಕಾರಿ ಶಾಲೆಗಳ ದುಸ್ಥಿತಿಯನ್ನು ಕಂಡು ತಂದೆ-ತಾಯಿ ಅನಿವಾರ‌್ಯವಾಗಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಪರಿಸ್ಥಿತಿ ಉದ್ಭವಿಸಿದೆಯೇ?

ಒಟ್ಟಾರೆ ಶಿಕ್ಷಣ ಇಲಾಖೆಯ ಕ್ಷಮತೆಗೆ ಇದು ಸಾಕ್ಷಿಯಾಗಿದೆ. ಒಮ್ಮೆ ಮುಚ್ಚಿದ ಈ ಸರ್ಕಾರಿ ಶಾಲೆಗಳ ಭವಿಷ್ಯವೇನು ಕಟ್ಟಡ, ಜಾಗ ಇತ್ಯಾದಿಗಳು. ಏನಾದರೇನಂತೆ, 3000 ಶಾಲೆಗಳಿಗೆ ತಗಲುವ ವೆಚ್ಚ ಕಡಿಮೆಯಾಯಿತಲ್ಲ, ಅಷ್ಟರಮಟ್ಟಿಗೆ ಸರ್ಕರಕ್ಕೆ ಸಮಾಧಾನವೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT