ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ಪ್ರಚಾರದ ಆಟ

Last Updated 27 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಒಂದೇ ಹಾಡಿಗೆ 35 ಲಕ್ಷ ಖರ್ಚು.
ಪ್ರಚಾರಕ್ಕಾಗಿ ಸಿನಿಮಾ ಚಿತ್ರಗಳನ್ನುಳ್ಳ 10 ಲಕ್ಷ ಟೀ-ಲೋಟಗಳು ಮಾರುಕಟ್ಟೆಗೆ.
ಪ್ರಚಾರಕ್ಕಾಗಿ ಬಜೆಟ್‌ನ 25 ಶೇಕಡಾ ಮೀಸಲು.

- ತಮ್ಮ ಮಗ ಸುಮಂತ್ ನಾಯಕನಾಗಿರುವ ಸಂಭ್ರಮವನ್ನು ನಿರ್ಮಾಪಕ ಶೈಲೇಂದ್ರ ಬಾಬು ಅದ್ದೂರಿಯಾಗಿಯೇ ಪ್ರಕಟಿಸುತ್ತಿರುವ ಬಗೆ ಇದು. ಸುಮಂತ್ ನಾಯಕತ್ವದ `ಆಟ~ ಚಿತ್ರದ ಕಂಪ್ಯೂಟರ್ ಗ್ರಾಫಿಕ್ ಕೆಲಸಗಳು ಚಾಲ್ತಿಯಲ್ಲಿರುವ ಈ ಹೊತ್ತಿನಲ್ಲೇ ಅವರು ಪ್ರಚಾರದ ಕುರಿತು ವಿಪರೀತ ತಲೆಕೆಡಿಸಿಕೊಂಡಿದ್ದಾರೆ. ರೈಲು ನಿಲ್ದಾಣಗಳಲ್ಲಿ, ಟೀವಿಗಳಿರುವ ರೈಲುಗಳಲ್ಲಿ ಕೂಡ ಚಿತ್ರದ ಪ್ರೋಮೋ ತೋರಿಸುವ ಚಿಂತನೆ ಅವರದ್ದು.

ನಿರ್ದೇಶಕ ವಿಜಯ್‌ಕುಮಾರ್ ಪ್ರಕಾರ ಈ ಚಿತ್ರ `ಪ್ರೇಮದಾಟ ಲೈಫಿನಾಟ~. ನಾಯಕಿ ವಿಭಾ ನಟರಾಜನ್ ಎಲ್ಲರ ಮಾತುಗಳನ್ನೂ ತಾವೊಬ್ಬರೇ ಆಡುವಷ್ಟು ಉತ್ಸಾಹದಲ್ಲಿದ್ದರು. ನಿರ್ದೇಶಕರ ಸಂಯಮ, ನಾಯಕನ ಶ್ರದ್ಧೆ, ನಿರ್ಮಾಪಕರ ಪಿತೃಸಮಾನ ವಾತ್ಸಲ್ಯ ಎಲ್ಲವನ್ನೂ ಹೊಗಳಲು ಅವರು ತಮ್ಮ ಮಾತನ್ನು ಮೀಸಲಿಟ್ಟರು.

ನಾಯಕಿಯ ಮಾತಿನ ಮಳೆಯಲ್ಲಿ ನೆಂದು ಶೀತವಾದವರಂತೆ ಕಂಡ ನಾಯಕ ಸುಮಂತ್ ರಂಗಾಭಿನಯ ಕಲಿತ ನಂತರವಷ್ಟೇ ಬಣ್ಣಹಚ್ಚಿರುವುದು. ವೇಗವಾಗಿ ಹೋಗುವ ಲಾರಿಯಿಂದ ಧುಮುಕಿದಾಗ ನಟನಾಗಿ ತಮಗಾದ ಖುಷಿ ಹಾಗೂ ತೃಪ್ತಿಯ ಕುರಿತು ಅವರಿಗೆ ವಿಪರೀತ ಹೆಮ್ಮೆ. `ಲೈಫೇ ಒಂದು ಆಟ. ನಮ್ಮ  ಸಿನಿಮಾ ಕೂಡ ಇದನ್ನೇ ಹೇಳುತ್ತದೆ~ ಎನ್ನುವ ಅವರು ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT