ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ಪ್ರತಿ ದಿನ 200 ಎಸ್‌ಎಂಎಸ್.!

Last Updated 1 ನವೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇನ್ನು ಮುಂದೆ  ಮೊಬೈಲ್ ಗ್ರಾಹಕರು ದಿನವೊಂದಕ್ಕೆ ಗರಿಷ್ಠ 200 ಎಸ್‌ಎಂಎಸ್‌ಗಳನ್ನು ತಮ್ಮ ಮೊಬೈಲ್‌ನಿಂದ  ಕಳುಹಿಸಬಹುದು.

ಅನಪೇಕ್ಷಿತ ಕರೆ ನಿಷೇಧದ ಜತೆಯಲ್ಲೇ ಜಾರಿಗೊಳಿಸಲಾಗಿದ್ದ 100 ಎಸ್‌ಎಂಎಸ್‌ಗಳ ಮಿತಿಯನ್ನು ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ  (ಟ್ರಾಯ್)  ಸೋಮವಾರದಿಂದಲೇ ಜಾರಿಗೆ ಬರುವಂತೆ  200ಕ್ಕೆ ವಿಸ್ತರಿಸಿದೆ.

ಕೆಲವು ಗ್ರಾಹಕರು ಮತ್ತು ದೂರವಾಣಿ ಸೇವಾ ಸಂಸ್ಥೆಗಳಿಂದ ಎಸ್‌ಎಂಎಸ್ ಮಿತಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ  ಹಿನ್ನೆಲೆಯಲ್ಲಿ, `ಟ್ರಾಯ್~ ಈ ಸಡಿಲಿಕೆ ಪ್ರಕಟಿಸಿದೆ. ಇನ್ನು ಮುಂದೆ ಚಂದಾದಾರರು ಒಂದು ಸಿಮ್‌ನಿಂದ 12 ಗಂಟೆಗಳ ಅವಧಿಯಲ್ಲಿ 200 ಎಸ್‌ಎಂಎಸ್‌ಗಳನ್ನು ಕಳುಹಿಸಬಹುದು ಎಂದು ಸ್ಪಷ್ಟಪಡಿಸಿದೆ. 

ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳದೆ, ಅಕ್ರಮವಾಗಿ ವಾಣಿಜ್ಯ `ಎಸ್‌ಎಂಎಸ್~ಗಳನ್ನು ಕಳುಹಿಸುತ್ತಿದ್ದ ಟೆಲಿ ಮಾರುಕಟ್ಟೆ ಕಂಪೆನಿಗಳ ಹಾವಳಿ ತಡೆಯಲು `ಎಸ್‌ಎಂಎಸ್~ ಮಿತಿ ಹೇರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT