ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ಸೊಳ್ಳೆ ಮೇಲೆ ದಾಳಿಗೆ ಡಿಆರ್ ಡಿ ಒ ಸಜ್ಜು..!

Last Updated 14 ಫೆಬ್ರುವರಿ 2011, 12:15 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸಶಸ್ತ್ರ ಪಡೆಗಳಿಗೆ ಕ್ಷಿಪಣಿ ಮತ್ತು ಯುದ್ಧೋಪಕರಣಗಳನ್ನು ಅಭಿವೃದ್ಧಿ ಪಡಿಸುತ್ತಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿ ಒ), ಈಗ ಮಾನವನ ಅನಾದಿ ಕಾಲದ ವೈರಿಗಳಾದ ~ಸೊಳ್ಳೆ~ಗಳ ಮೇಲೆ ದಾಳಿಗೆ ಸಜ್ಜಾಗಿದೆ.

ಮಲೇರಿಯಾ, ಡೆಂಗೆಯಂತಹ ಕಾಯಿಲೆಗಳ ವಾಹಕವಾಗಿ ಕೆಲಸ ಮಾಡುವ ಮಾನವ ಶತ್ರು ~ಸೊಳ್ಳೆಗಳನ್ನು ನಿವಾರಿಸುವಂತಹ  ಹೊಸ ಕೀಟ ನಿರೋಧಕ ಕ್ರೀಮ್ ನ್ನು  ಡಿಆರ್ ಡಿ ಒ ಅಭಿವೃದ್ಧಿ ಪಡಿಸಿದೆ.

~ಮ್ಯಾಕ್ಸೊ ಮಿಲಿಟರಿ~ ಮತ್ತು ~ಮ್ಯಾಕ್ಸೊ ಸೇಫ್ ಅಂಡ್ ಸಾಫ್ಟ್ ವೈಪ್ಸ್~ ಎಂಬ ಎರಡು ಉತ್ಪನ್ನಗಳನ್ನು ಇಲ್ಲಿ ಸೋಮವಾರ  ಬಿಡುಗಡೆ ಮಾಡಿದ ಡಿಆರ್ ಡಿ ಒ ~ಈ ಕ್ರೀಮ್ ಸೊಳ್ಳೆಗಳನ್ನು ಮೂರ್ಖವನ್ನಾಗಿ ಮಾಡುತ್ತವೆ. ಸುವಾಸನೆಯುಳ್ಳ ಈ ಕ್ರೀಮ್ ಚರ್ಮದ ಸೂಕ್ಷ್ಮ ರಂಧ್ರಗಳಿಗೆ ಯಾವುದೇ ರೀತಿಯಲ್ಲಿ ಅಡ್ಡಿಯಾಗುವುದೂ ಇಲ್ಲ. ಸಾಮಾನ್ಯವಾಗಿ ಇಂತಹ ಕ್ರೀಮ್ ಗಳಿಂದ ಸೂಕ್ಷ್ಮರಂಧ್ರಗಳಿಗೆ ಅಡ್ಡಿಯಾಗುತ್ತದೆ~ ಎಂದು ಹೇಳಿತು.

ಪರೀಕ್ಷಿಸಲಾಗಿರುವ ಈ ವಿಶಿಷ್ಟ ಕ್ರೀಮ್ ಸೊಳ್ಳೆಗಳನ್ನು ಮರಳು ಮಾಡಿ ಆಕರ್ಷಿಸುತ್ತದೆ ಮತ್ತು ವಂಚಿಸುತ್ತದೆ. ಪಕ್ಕದಲ್ಲೇ ಮಾನವ ರಕ್ತ ಇದೆ ಎಂಬುದನ್ನು ಸೊಳ್ಳೆಗಳ ಅರಿವಿಗೇ ಬಾರದಂತೆ ಈ ಕ್ರೀಮ್ ಮಾಡುತ್ತದೆ ಎಂದು ಡಿಆರ್ ಡಿ ಒ ಮುಖ್ಯ ನಿಯಂತ್ರಕ ಪ್ರಹ್ಲಾದ ವರದಿಗಾರರಿಗೆ ವಿವರಿಸಿದರು.

ಅರಣ್ಯ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಬೇಕಾದ ಯೋಧರನ್ನು ಮಲೇರಿಯಾ, ಚಿಕುನ್ ಗುನ್ಯ, ಡೆಂಗೆಯಂತಹ ರೋಗಗಳಿಂದ ರಕ್ಷಿಸುವ ಗುರಿ ಇಟ್ಟುಕೊಂಡು ಈ ಕ್ರೀಮ್ ಅಭಿವೃದ್ಧಿ ಪಡಿಸಲಾಗಿದೆ ಎಂದು ಜ್ಯೋತಿ ಲ್ಯಾಬೋರೇಟರಿ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಎಂ.ಪಿ. ರಾಮಚಂದ್ರನ್ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT