ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿಪ್ಟ್: ಫುಟ್‌ಬಾಲ್ ಹಿಂಸಾಚಾರಕ್ಕೆ ವಿರೋಧ

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕೈರೊ (ಪಿಟಿಐ): ಪೋರ್ಟ್‌ಸೆಡ್‌ನಲ್ಲಿ ಫುಟ್‌ಬಾಲ್ ಪಂದ್ಯದ ಸಂದರ್ಭದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಕೈರೊದಲ್ಲಿ ಗುರುವಾರ ಸಾವಿರಾರು ಜನ ಬೀದಿಗಿಳಿದು ಪ್ರತಿಭಟಿಸಿದರು.

`ಇದು ಕ್ರೀಡಾ ಅಪಘಾತವಲ್ಲ. ಸೇನಾ ನರಮೇಧ~ ಎಂದು ಘೋಷಣೆ ಕೂಗುತ್ತ್ದ್ದಿದ ಪ್ರತಿಭಟನಾಕಾರರು ಅಲ್- ಅಹ್ಲಿ ಕ್ಲಬ್‌ನಿಂದ ತಹ್ರೀರ್ ಚೌಕದ ಮಾರ್ಗವಾಗಿ ಒಳಾಡಳಿತ ಸಚಿವಾಲಯದತ್ತ ಮೆರವಣಿಗೆಯಲ್ಲಿ ತೆರಳಿದರು.

ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಈ ಸಂದರ್ಭದಲ್ಲಿ ಮೂರು ಜನ ಸತ್ತಿದ್ದು, 400ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

ಈಜಿಪ್ಟ್‌ನಲ್ಲಿ ಸದ್ಯ ಆಡಳಿತ ನಡೆಸುತ್ತಿರುವ ಸೇನಾ ಮಂಡಳಿ ಈ ಹಿಂಸಾಚಾರಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ ಫುಟ್‌ಬಾಲ್ ಪ್ರೇಮಿಗಳು, ಸೇನಾ ಸರ್ಕಾರದ ನೇತೃತ್ವ ವಹಿಸಿರುವ ಫೀಲ್ಡ್ ಮಾರ್ಷಲ್ ಹುಸೇನ್ ತಂತ್ವಿ ಅವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ಪೋರ್ಟ್‌ಸೆಡ್ ಘಟನೆಗೆ ಸೇನಾ ಆಡಳಿತ ಕಾರಣವಾಗಿದೆ ಎಂದು ಮುಸ್ಲಿಂ ಬ್ರದರ್‌ಹುಡ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸಹ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT