ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿಪ್ಟ್ ಬಿಕ್ಕಟ್ಟಿಗೆ 24 ಗಂಟೆಯೊಳಗೆ ಪರಿಹಾರ!

Last Updated 11 ಫೆಬ್ರುವರಿ 2011, 10:20 IST
ಅಕ್ಷರ ಗಾತ್ರ

ಈಜಿಪ್ಟ್ (ಕೈರೊ) (ಪಿಟಿಐ): ಅಧ್ಯಕ್ಷರ ಮೂವತ್ತು ವರ್ಷದ ಆಡಳಿತದಿಂದ ರೋಸಿಹೋಗಿರುವ ನಾಗರಿಕರು ಆಕ್ರೋಶಗೊಂಡು ಬದಲಾವಣೆ ಬಯಸಿ ಪ್ರತಿಭಟನೆ ನಡೆಸುತ್ತಿದ್ದರೂ, ಈಜಿಪ್ಟ್ ಅಧ್ಯಕ್ಷ ಹೋಸ್ನಿ ಮುಬಾರಕ್ ಅವರು ಅಧಿಕಾರದಿಂದ ಕೆಳಗಿಳಿಯುತ್ತಿಲ್ಲ.

ಸೇನೆಯು ಮುಂಚೂಣಿಯ ಸ್ಥಾನಕ್ಕೆ ಬಂದಿದ್ದು, ಸೇನೆ ಹಿರಿಯ ಅಧಿಕಾರಿಗಳು ಪರಿಹಾರ ಕಂಡುಕೊಳ್ಳಲು ಮುಂದಾಗಿರುವುದು ಹೊಸ ಭರವಸೆ ಮೂಡಿಸಿದೆ. ಕಳೆದ ಎರಡು ವಾರಗಳಿಂದ ಈಜಿಪ್ಟ್‌ನಲ್ಲಿ ತಲೆದೊರಿರುವ ರಾಜಕೀಯ ಬಿಕ್ಕಟ್ಟು ಇದೀಗ ನಿವಾರಣೆ ಆಗುವ ಲಕ್ಷಣಗಳು ಕಾಣಿಸತೊಡಗಿವೆ. 

ಈಜಿಪ್ಟ್‌ನ ಸೇನೆಯ ಅತ್ಯನ್ನುತ ಮಂಡಳಿಯು ರಕ್ಷಣಾ ಸಚಿವ  ಟಿ. ಹುಸೇನ್ ಅವರ ನೇತೃತ್ವದಲ್ಲಿ ಶುಕ್ರವಾರ ಎರಡನೇ ಬಾರಿ ಸಭೆ ನಡೆಸಿದೆ.

ಈ ಮಂಡಳಿಯ ಸಭೆಯು, ಇನ್ನು 24 ಗಂಟೆಯೊಳಗೆ ಈಜಿಪ್ಟ್‌ನ ರಾಜಕೀಯ ಬಿಕ್ಕಟ್ಟಿಗೆ ಅಂತಿಮ ರೂಪ ನೀಡುವುದರೊಂದಿಗೆ ಮಹತ್ವವಾದ ಪರಿಹಾರದ ನಿರ್ಣಯನ್ನು ಕೈಗೊಳ್ಳಲಿದೆ ಎಂಬ ಸಂಗತಿ ಕೈರೊ ವೃತ್ತದಲ್ಲಿ ಸೇರಿರುವ ಸಾವಿರಾರು ಜನರಿಗೆ ಆಶಾ ಭಾವನೆ ಮೂಡಿಸಿದೆ.

ಈ ಬಾರಿಯೂ  ಕೂಡ ಅಧ್ಯಕ್ಷ ಹೊಸ್ನಿ ಮುಬಾರಕ್ ಅವರನ್ನು ಮಂಡಳಿಯ ಸಭೆಯಿಂದ ಹೊರಗಿಡಲಾಗಿತ್ತು ಎನ್ನಲಾಗಿದೆ.

 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT