ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿಪ್ಟ್ ರಕ್ತರಹಿತ ಕ್ರಾಂತಿಗೆ ಗಾಂಧಿ ಪ್ರೇರಣೆ

Last Updated 24 ಫೆಬ್ರುವರಿ 2011, 16:00 IST
ಅಕ್ಷರ ಗಾತ್ರ

ವಾಷಿಂಗ್ಟನ್, (ಪಿಟಿಐ): ಈಜಿಪ್ಟ್ ಕ್ರಾಂತಿಯನ್ನು ಮನದುಂಬಿ ಕೊಂಡಾಡಿರುವ ಅಮೆರಿಕದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ರಕ್ತರಹಿತ ಕ್ರಾಂತಿ ಮಾಡುವ ಮೂಲಕ ಈಜಿಪ್ಟ್ ಯುವಕರು ಮಹಾತ್ಮ ಗಾಂಧಿ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರ ಆದರ್ಶ, ತತ್ವ, ಸಿದ್ಧಾಂತಗಳನ್ನು ಎತ್ತಿ ಹಿಡಿದಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಬಂದೂಕನ್ನು ಕೈಗೆತ್ತಿಕೊಳ್ಳದೆ ಹೇಗೆ ಬದಲಾವಣೆ ತರಬಹುದು ಎಂಬುವುದನ್ನು ಗಾಂಧಿ ಮತ್ತು ಲೂಥರ್ ಕಿಂಗ್ ಅವರಂಥ ನಾಯಕರು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಅವರು ತೋರಿದ ಮಾರ್ಗದಲ್ಲಿ ಈಜಿಪ್ಟ್ ಜನರು ನಡೆದು ಯಶಸ್ವಿಯಾಗಿದ್ದಾರೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈಜಿಪ್ಟ್ ಜನರೊಂದಿಗೆ ವೆಬ್-ಸೋಷಿಯಲ್ ಮಾಧ್ಯಮದ ಮೂಲಕ ಗುರುವಾರ ನಡೆದ ಸಂವಾದದ ಬಳಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಇಬ್ಬರು ಮಹಾತ್ಮರ ತತ್ವಾದರ್ಶಗಳು ಇಂದಿಗೂ ಹೇಗೆ ಪ್ರಸ್ತುತ ಎಂಬುವುದನ್ನು ಮಧ್ಯ ಪ್ರಾಚ್ಯದಲ್ಲಿ ನಡೆದ ಘಟನೆಗಳು ಸಾಬೀತುಪಡಿಸಿವೆ ಎಂದರು.

 ಅಹಿಂಸಾತ್ಮಕ ಮತ್ತು ಶಾಂತಿಯುತ ಮಾರ್ಗದಲ್ಲಿ ರಕ್ತರಹಿತ ಕ್ರಾಂತಿಯ ಮೂಲಕ ರಾಷ್ಟ್ರ ಮತ್ತು ಸಮಾಜದಲ್ಲಿ ಕ್ರಾಂತಿಕಾರಿಕ ಬದಲಾವಣೆ ತರಬಹುದು ಎನ್ನಲು ಭಾರತದ ಸ್ವಾತಂತ್ರ್ಯ ಸಂಗ್ರಾಮ ಮತ್ತು ಅಮೆರಿಕದ ನಾಗರಿಕ ಹಕ್ಕುಗಳ ಆಂದೋಲನಗಳೇ ಉತ್ತಮ ನಿದರ್ಶನ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗಾಂಧಿ ಮತ್ತು ಅಹಿಂಸೆಯಿಂದಾಗಿಯೇ ಭಾರತ ಇಂದು ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಹೊರಹೊಮ್ಮಿದೆ. ಅಹಿಂಸೆ ಮಾರ್ಗದಲ್ಲಿ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಭಾರತ ಮತ್ತು ಅಮೆರಿಕದ ಇತಿಹಾಸ ಸಾಕ್ಷಿ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT