ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿಪ್ಟ್ : ಸುಪ್ರೀಂ ಕೋರ್ಟ್‌ಗೆ ಸರ್ಕಾರದ ಸವಾಲು

Last Updated 10 ಜುಲೈ 2012, 19:30 IST
ಅಕ್ಷರ ಗಾತ್ರ

ಕೈರೊ (ಪಿಟಿಐ): ರಾಜಕೀಯ ಅಸ್ಥಿರತೆ ಬೇಗುದಿಯಲ್ಲಿರುವ ಈಜಿಪ್ಟ್‌ನಲ್ಲಿ ವಿಸರ್ಜನೆಗೊಂಡ ಸಂಸತ್ ಮಂಗಳವಾರ ಮರು ಸಮಾವೇಶಗೊಂಡಿದ್ದು, ಸಂಸತ್ತನ್ನು ರದ್ದು ಮಾಡಿದ್ದ ಸುಪ್ರೀಂಕೋರ್ಟ್‌ಗೆ ಸರ್ಕಾರ ಸವಾಲು ಹಾಕಿದೆ. ಆಡಳಿತದ ಚುಕ್ಕಾಣಿ ಹಿಡಿಯಲು ನಡೆಯುತ್ತಿರುವ ಈ ಹೋರಾಟದಿಂದ ರಾಷ್ಟ್ರದಲ್ಲಿ ತಳಮಳ ಉಂಟಾಗಿದೆ.

ಅಧ್ಯಕ್ಷ ಮಹಮ್ಮದ್ ಮೊರ್ಸಿ ಅವರು ವಿಸರ್ಜನೆಗೊಂಡ ಸಂಸತ್ತನ್ನು ಮರು ಸ್ಥಾಪಿಸಲು ಹೊರಟಿರುವುದು ಸಾಧುವಲ್ಲ ಎಂದು ಸುಪ್ರೀಂಕೋರ್ಟ್ ಮತ್ತು ಸೇನಾ ಮಂಡಳಿ ಸೋಮವಾರ ಎಚ್ಚರಿಕೆ ನೀಡಿದ್ದವು.
ಈ ಎಚ್ಚರಿಕೆಯ ಹೊರತಾಗಿಯೂ ಮಂಗಳವಾರ ಸಂಸತ್ ಸಮಾವೇಶಗೊಂಡಿದೆ. `ಶಾಸಕಾಂಗವು ನ್ಯಾಯಾಂಗದ ಜೊತೆಗೆ ಸಂಘರ್ಷಕ್ಕೆ ಇಳಿದಿಲ್ಲ. ಕಾನೂನು ಮತ್ತು ಸುಪ್ರೀಂ  ಕೋರ್ಟ್ ಬಗ್ಗೆ ಸದನಕ್ಕೆ ಅಪಾರ ಗೌರವ ಇದೆ. ನಾವು ಸುಪ್ರೀಂಕೋರ್ಟ್‌ನ ತೀರ್ಪಿಗೆ ಸವಾಲು ಹಾಕುತ್ತಿಲ್ಲ~ ಎಂದು ಸ್ಪೀಕರ್ ಹೇಳಿದ್ದಾರೆ.

ಸಂಸತ್ ಅಧಿವೇಶನವನ್ನು ಲಿಬರಲ್ ಮತ್ತು ಎಡರಂಗದ ಸಂಸದರು ಬಹಿಷ್ಕರಿಸಿದ್ದು, ಅಧ್ಯಕ್ಷ ಮೊರ್ಸಿ ಅವರು `ಸಂವಿಧಾನದ ಮೇಲೆ ಆಕ್ರಮಣ ಮಾಡತೊಡಗಿದ್ದಾರೆ~ ಎಂದು ಕೆಲವು ಸಂಸದರು ಟೀಕಿಸಿದ್ದಾರೆ.

ಸಂಸತ್‌ನ ಮೂರನೇ ಒಂದು ಭಾಗದಷ್ಟು ಸದಸ್ಯತ್ವಕ್ಕೆ ನಡೆದ ಚುನಾವಣೆಯು ಅಸಿಂಧು ಎಂದು ಹೇಳಿದ್ದ ಸುಪ್ರೀಂಕೋರ್ಟ್, ಕಳೆದ ತಿಂಗಳು ಸಂಸತ್ತನ್ನು ವಿಸರ್ಜಿಸಿ ತೀರ್ಪು ನೀಡಿತ್ತು. `ಮುಸ್ಲಿಂ ಬ್ರದರ್‌ಹುಡ್ಸ್ ಫ್ರೀ ಡಂ ಮತ್ತು ಜಸ್ಟೀಸ್~ ಪಕ್ಷದ ಸದಸ್ಯರೇ ಆ ಚುನಾವಣೆಯಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT