ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜು: ಅರ್ಹತಾಗೆ ಮೂರು ಕೂಟ ದಾಖಲೆ ಶ್ರೇಯ

Last Updated 5 ಫೆಬ್ರುವರಿ 2011, 16:30 IST
ಅಕ್ಷರ ಗಾತ್ರ

ತಿರುವನಂತಪುರ: ಅರ್ಹತಾ ಮಾಗಾವಿ ಅವರು ಕರ್ನಾಟಕದ ಪ್ರಾಬಲ್ಯಕ್ಕೆ ಬಲ ನೀಡಿದ್ದು ಇಲ್ಲಿ ನಡೆಯುತ್ತಿರುವ 24ನೇ ದಕ್ಷಿಣ ವಲಯ ಈಜು ಚಾಂಪಿಯನ್ ಷಿಪ್‌ನಲ್ಲಿ ಶನಿವಾರ ಮೂರು ನೂತನ ಕೂಟ ದಾಖಲೆ ಶ್ರೇಯಕ್ಕೆ ಪಾತ್ರರಾದರು.

ಚಾಂಪಿಯನ್‌ಷಿಪ್‌ನ ಎರಡನೇ ದಿನ ಹದಿನಾರು ಹೊಸ ದಾಖಲೆಗಳು ಕಾಣಿಸಿದವು. ಅವುಗಳಲ್ಲಿ ಒಂಬತ್ತು ಕರ್ನಾಟಕದವರಿಂದ ಎನ್ನುವುದು ವಿಶೇಷ. ಅರ್ಹತಾ ಅವರು 50 ಮೀ. (ಕಾಲ: 30.99 ಸೆ.) ಮತ್ತು 200 ಮೀ. ಬಟರ್‌ಫ್ಲೈ (2 ನಿಮಿಷ 31.75 ಸೆ.) ಹಾಗೂ 200 ಮೀ. ಫ್ರೀಸ್ಟೈಲ್(2 ನಿಮಿಷ 15.18 ಸೆ.)ನಲ್ಲಿ ನೂತನ ದಾಖಲೆ ಬರೆದರು.

ಈವರೆಗೆ ನಡೆದ ಸ್ಪರ್ಧೆಗಳಲ್ಲಿ ಸಾಧಿಸಿರುವ ಪ್ರಾಬಲ್ಯದೊಂದಿಗೆ ಕರ್ನಾಟಕವು (774 ಪಾಯಿಂಟ್ಸ್) ಸಮಗ್ರ ಚಾಂಪಿಯನ್‌ಷಿಪ್‌ನ ಪಾಯಿಂಟುಗಳ ಪಟ್ಟಿಯಲ್ಲಿ ಎತ್ತರದಲ್ಲಿ ನಿಂತಿದೆ. ತಮಿಳುನಾಡು ಹಾಗೂ ಕೇರಳ ತಂಡದವರು ತಲಾ 381 ಪಾಯಿಂಟುಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

ಬಾಲಕರ ವಿಭಾಗದಲ್ಲಿ ಸೌರಭ್ ಸಾಂಗ್ವೇಕರ್ (800 ಮೀ. ಫ್ರೀಸ್ಟೈಲ್: 8 ನಿಮಿಷ 48.58 ಸೆ.; 200 ಮೀ. ಫ್ರೀಸ್ಟೈಲ್: 2 ನಿಮಿಷ 21.13 ಸೆ.), ಬಿ.ಪ್ರಣಾಮ್ (200 ಮೀ. ಬ್ಯಾಕ್‌ೀಕ್: 2 ನಿಮಿಷ 18.57 ಸೆ.) ಅವರೂ ನೂತನ ಕೂಟ ದಾಖಲೆಯ ಹಿರಿಮೆಯೊಂದಿಗೆ ಹಿಗ್ಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT