ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜು: ಭಾರತಕ್ಕೆ ಮತ್ತೆ ಎರಡು ಸ್ವರ್ಣ ಪದಕ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ ಈಜು ಸ್ಪರ್ಧಿಗಳು ಜಕಾರ್ತಾದಲ್ಲಿ ನಡೆಯುತ್ತಿರುವ ಏಳನೇ ಏಷ್ಯನ್ ವಯೋವರ್ಗ ಈಜು ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ದಿನವಾದ ಬುಧವಾರವೂ ಪ್ರಾಬಲ್ಯ ಮೆರೆದರು.

ಎರಡು ಸ್ವರ್ಣ, ಮೂರು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಗೆಲ್ಲುವುದರೊಂದಿಗೆ ಈ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದ ಒಟ್ಟು ಪದಕಗಳ ಸಂಖ್ಯೆಯನ್ನು ಭಾರತದವರು 24 ಆಗಿಸಿಕೊಂಡರು.

ವೀರ್‌ಧವಳ್ ಖಾಡೆ ಭಾರತದ ಖಾತೆಗೆ ಏಳು ಸ್ವರ್ಣ ಹಾಗೂ ಎರಡು ಬೆಳ್ಳಿ ಪಕದ ಸೇರಿಸಿದ್ದಾರೆ. ಖಾಡೆ 100 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ (ಕಾಲ: 0:50.31 ಸೆ.) ಬುಧವಾರ ಅಗ್ರಸ್ಥಾನದ ಗೌರವ ಪಡೆದರು. ಮೂರನೇ ದಿನ ಭಾರತಕ್ಕೆ ಇನ್ನೊಂದು ಬಂಗಾರ ಬಂದಿದ್ದು ರಿಚಾ ಮಿಶ್ರಾ ಪ್ರಯತ್ನದಿಂದ. ಅವರು 400 ಮೀ. ವೈಯಕ್ತಿಕ ಮೆಡ್ಲೆಯಲ್ಲಿ (4:33.77 ಸೆ.) ಮೊದಲಿಗರಾಗಿ ಗುರಿ ಮುಟ್ಟಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT