ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಡಿಗ ಸಮಾಜದ ಸಂಘಟನೆಗೆ ರೇಣುಕಾನಂದ ಸ್ವಾಮೀಜಿ ಕರೆ

Last Updated 25 ಮೇ 2012, 6:10 IST
ಅಕ್ಷರ ಗಾತ್ರ

ಚನ್ನಗಿರಿ: ರಾಜ್ಯದಲ್ಲಿ ಈಡಿಗ ಜನಾಂಗ ಅತಿ ಹಿಂದುಳಿದ ಮೂರನೇ ದೊಡ್ಡ ವರ್ಗವಾಗಿದೆ. ಸಂಘಟನೆಯ ಕೊರತೆಯಿಂದ ಸಮಾಜದ ಪ್ರಗತಿ ಕುಂಠಿತವಾಗಿದೆ. ಆ ಕಾರಣದಿಂದ ಎಲ್ಲಾ ತಾಲ್ಲೂಕುಗಳಲ್ಲಿ ಸಂಘದ ಸ್ಥಾಪನೆ ಕಾರ್ಯ ಮುಂದುವರಿದಿದೆ. ಸಮಾಜದ ಪ್ರಗತಿಗಾಗಿ ಸಮಾಜದ ಬಾಂಧವರು ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಆರ್ಯ ಈಡಿಗರ ಮಹಾ ಸಂಸ್ಥಾನ ಸೋಲೂರು ಮಠದ ಕುಲಗುರು ರೇಣುಕಾನಂದ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ನಲ್ಲೂರು ಗ್ರಾಮದಲ್ಲಿ ಗುರುವಾರ ನಡೆದ ತಾಲ್ಲೂಕು ಆರ್ಯ ಈಡಿಗ ಸಂಘ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಕಾರವಂತ ವ್ಯಕ್ತಿ ದೇಶಕ್ಕೂ ಹಾಗೂ ಧರ್ಮಕ್ಕೂ ಕೀರ್ತಿ ತರುತ್ತಾನೆ. ಮನುಷ್ಯ ಉತ್ತಮ ಆಚಾರ-ವಿಚಾರಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ಈ ಸಮಾಜದ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣವನ್ನು ಕೊಡಿಸುವತ್ತ ಗಮನಹರಿಸಬೇಕು. ತಾಲ್ಲೂಕಿನಲ್ಲಿ 10 ಸಾವಿರಕ್ಕಿಂತ ಹೆಚ್ಚು ಸಮಾಜದ ಬಾಂಧವರಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಸಮಾಜದವರು ಇದ್ದಾರೆಯೇ ಎಂಬುದರ ಬಗ್ಗೆ ಸಂಘ-ಸಂಸ್ಥೆಗಳನ್ನು ಸ್ಥಾಪಿಸುವುದರಿಂದ ಗೊತ್ತಾಗುತ್ತದೆ. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ. ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ವಿದ್ಯೆಯನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಸಮಾಜದ ಪ್ರಗತಿಗಾಗಿ ಎಲ್ಲಾ ರೀತಿಯ ಸಹಕಾರವನ್ನು ನೀಡಬೇಕು ಎಂದರು.

ಮಾಡಾಳ್ ಪ್ರಶಾಂತ್, ದಾವಣಗೆರೆ ರೇಣುಕಾಂಬಾ ಬ್ಯಾಂಕ್ ಕಾರ್ಯದರ್ಶಿ ದೇವೇಂದ್ರಪ್ಪ, ಸಮಾಜದ ಮುಖಂಡರಾದ ತೆಲಗಿ ಜೀವಪ್ಪ, ಕೃಷ್ನಮೂರ್ತಿ, ಭರಮಪ್ಪ, ಇ. ರಾಜಣ್ಣ, ದುರ್ಗಪ್ಪ, ಜಿಲ್ಲಾ ಆರ್ಯ ಈಡಿಗ ಸಮಾಜದ ಮಹಿಳಾ ಸಂಘದ ಅಧ್ಯಕ್ಷೆ ಲಕ್ಷ್ಮೀ ತಿಮ್ಮಪ್ಪ ಉಪಸ್ಥಿತರಿದ್ದರು.

ಮೋಹನ್‌ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಎಚ್. ಶಂಕರ್ ಅಧ್ಯಕ್ಷತೆ ವಹಿಸಿದ್ದರು.

ನಾಗಲಕ್ಷ್ಮೀ ಪ್ರಾರ್ಥಿಸಿದರು. ಪಿ. ಓಂಕಾರಮೂರ್ತಿ ಸ್ವಾಗತಿಸಿದರು.  ಪದಾಧಿಕಾರಿಗಳ ಆಯ್ಕೆ: ತಾಲ್ಲೂಕು ಆರ್ಯ ಈಡಿಗ ಸಂಘ ಗುರುವಾರ ಅಸ್ತಿತ್ವಕ್ಕೆ ಬಂದಿದ್ದು, ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆರ್ಯ ಈಡಿಗ ಮಹಾ ಸಂಸ್ಥಾನ ಸೋಲೂರು ಮಠದ ರೇಣುಕಾನಂದ ಸ್ವಾಮೀಜಿ ಸಮ್ಮುಖದಲ್ಲಿ ನಲ್ಲೂರು ಗ್ರಾಮದಲ್ಲಿ ಆಯ್ಕೆ ಮಾಡಲಾಗಿದೆ.

ತಿಪ್ಪೇಸ್ವಾಮಿ ಚನ್ನಗಿರಿ (ಗೌರವಾಧ್ಯಕ್ಷ), ಗಂಗಾಧರ್ ಭೈರನಹಳ್ಳಿ(ಅಧ್ಯಕ್ಷ), ಶ್ರೀನಿವಾಸ್ ಮಾದೇನಹಳ್ಳಿ, ದಯಾನಂದ್ ನಲ್ಲೂರು (ಉಪಾಧ್ಯಕ್ಷ), ರಂಗಸ್ವಾಮಿ ದೊಡ್ಡಘಟ್ಟ (ಪ್ರಧಾನ ಕಾರ್ಯದರ್ಶಿ), ಮೂರ್ತಿ ಹೊಸೂರು (ಕಾರ್ಯದರ್ಶಿ), ಓಂಕಾರಮೂರ್ತಿ(ಖಜಾಂಚಿ), ರಮೆಶ್ ಸೇವಾನಗರ, ಜಯ್ಯಪ್ಪ ಕಬ್ಬಳ, ತಿಮ್ಮಪ್ಪ ಬೆಂಕಿಕೆರೆ (ಸಂಘಟನಾ ಕಾರ್ಯದರ್ಶಿ) ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಆರ್. ಹಾಲೇಶ್ ಉಪನ್ಯಾಸಕರು ಭೈರನಹಳ್ಳಿ ಹಾಗೂ ಎಚ್. ಮೋಹನ್‌ಕುಮಾರ್ ಶಿಕ್ಷಕರು ಮಾದೇನಹಳ್ಳಿ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT