ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ಬೆಲೆ ಕುಸಿತ: ರೈತರಿಂದ ರಸ್ತೆ ತಡೆ

Last Updated 3 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉಳ್ಳಾಗಡ್ಡಿ ಬೆಲೆ ಕುಸಿತ ಖಂಡಿಸಿ ರೈತರು ಇಲ್ಲಿನ ಅಮರಗೋ­ಳದ ಎಪಿಎಂಸಿ ಪ್ರಾಂಗಣದ ಬಳಿ ಮಂಗಳವಾರ 45 ನಿಮಿಷ  ರಸ್ತೆ ತಡೆ ನಡೆಸಿ ದರು.

ಕ್ವಿಂಟಲ್‌ಗೆ ₨3,500ರಿಂದ 4,000 ದವರೆಗೆ ಇದ್ದ ಉಳ್ಳಾಗಡ್ಡಿ ಬೆಲೆ ಸೋಮ ವಾರ ₨2,200ಕ್ಕೆ ಇಳಿದಿತ್ತು. ಇದು ಬೆಳೆ ಗಾರರ ಆಕ್ರೋಶಕ್ಕೆ ಕಾರಣವಾಯಿತು.

ಪಕ್ಷಾತೀತ ರೈತ ಹೋರಾಟ ಸಂಘ ಟನೆ ನೇತೃತ್ವದಲ್ಲಿ ಒಟ್ಟುಗೂಡಿದ ರೈತರು, ಎಪಿಎಂಸಿಯಲ್ಲಿ ಉಳ್ಳಾಗಡ್ಡಿ ವಹಿವಾಟು ಬಂದ್ ಮಾಡಿಸಿ ಮಧ್ಯಾಹ್ನ ಹುಬ್ಬಳ್ಳಿ–ಧಾರವಾಡ ರಸ್ತೆಗೆ ಬಂದು ಪ್ರತಿಭಟನೆ ಆರಂಭಿಸಿ­ದರು. ರಸ್ತೆ ಮಧ್ಯೆ ಕಲ್ಲುಗಳನ್ನಿಟ್ಟು ಅಲ್ಲಿಯೇ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಗುಣಮಟ್ಟದ ಆಧಾರದ ಮೇಲೆ ಎ, ಬಿ ಮತ್ತು ಸಿ ಎಂದು ವಿಂಗಡಿಸಿ, ಎ ವರ್ಗಕ್ಕೆ ಕ್ವಿಂಟಲ್‌ಗೆ ₨3,000, ಬಿ ವರ್ಗಕ್ಕೆ ₨2,500 ಹಾಗೂ ಸಿ ವರ್ಗಕ್ಕೆ  ₨2,000 ನಿಗದಿಗೊಳಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಕೊನೆಗೆ ಅವರನ್ನು ಸಮಾಧಾನಪಡಿಸಿ, ಎಪಿಎಂಸಿ ಸಭಾಂಗಣಕ್ಕೆ ಕರೆತರಲಾಯಿತು. ಅಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ವರ್ತಕರು ಮತ್ತು ಬೆಳೆಗಾ­ರರ ನಡುವೆ ಸಂಧಾನ ಸಭೆ ನಡೆಯಿತು.

ಸಂಧಾನ ವಿಫಲ: ಮಹಾರಾಷ್ಟ್ರ, ಆಂಧ್ರ ಪ್ರದೇಶದಿಂದ ಭಾರಿ ಪ್ರಮಾಣದಲ್ಲಿ ಉಳ್ಳಾಗಡ್ಡಿ ಬೆಂಗಳೂರಿಗೆ ರವಾನೆ ಆಗು ತ್ತಿದೆ. ಇದರಿಂದ ಸ್ಥಳೀಯ ಉತ್ಪನ್ನಕ್ಕೆ ಬೇಡಿಕೆ ಇಲ್ಲವಾಗಿದೆ. ಮುಂದಿನ ದಿನಗ ಳಲ್ಲಿ ಇನ್ನಷ್ಟು ಬೆಲೆ ಕುಸಿಯಲಿದೆ. ಈಗಿ ರುವ ಈರುಳ್ಳಿಯನ್ನು ಬೇಗ ಮಾರಾಟ ಮಾಡುವಂತೆ ಬೆಳೆಗಾರರಿಗೆ ವರ್ತಕರ ಸಂಘದ ಅಧ್ಯಕ್ಷ ಸಲೀಂ ಬ್ಯಾಹಟ್ಟಿ ಸಲಹೆ ನೀಡಿದರು.

ಇದಕ್ಕೊಪ್ಪದ ರೈತ ಮುಖಂಡ ಬಿ.ಎಂ.ಹನಸಿ, ಮುಂಜಾನೆಯಿಂದ ಖರೀದಿ ಆಗಿರುವ ಉಳ್ಳಾಗಡ್ಡಿಗೆ  ₨1,000 ಹೆಚ್ಚುವರಿಯಾಗಿ ನೀಡುವಂತೆ ಒತ್ತಾಯಿಸಿದರು. ಅದಕ್ಕೆ ವರ್ತಕರು ಸಮ್ಮತಿಸಲಿಲ್ಲ. ಎಪಿಎಂಸಿ ಅಧ್ಯಕ್ಷ ಸುರೇಶ ದಾಸನೂರ ಅವರು ನಡೆಸಿದ ಸಂಧಾನ ಯತ್ನವೂ ವಿಫಲವಾಯಿತು. ಕೊನೆಗೆ ಹೋರಾಟವನ್ನು ಬುಧವಾರಕ್ಕೆ ಮುಂದೂಡಿದ ರೈತರು, ನ್ಯಾಯಯುತ ಬೆಲೆಗೆ ಟೆಂಡರ್ ಆಗದಿದ್ದಲ್ಲಿ ಮತ್ತೆ ಬೀದಿಗಿಳಿಯುವ ಎಚ್ಚರಿಕೆ ನೀಡಿ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT