ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉ. ಕೊರಿಯಾ: ಮಾವನಿಗೇ ಮರಣದಂಡನೆ

Last Updated 14 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸೋಲ್ (ನ್ಯೂಯಾರ್ಕ್ ಟೈಮ್ಸ್‌): ಉತ್ತರ ಕೊರಿಯಾದ ಯುವ ಸರ್ವಾ­ಧಿಕಾರಿ ಕಿಮ್ ಜಾಂಗ್ ಉನ್‌ ಅವರ ಮಾವ (ತಂದೆಯ ಸಹೋದರಿಯ ಪತಿ) ಜಾಂಗ್‌ ಸೊಂಗ್‌ಥೇಕ್‌ ಅವ­ರಿಗೆ ಸೇನಾಕ್ರಾಂತಿಗೆ ಸಂಚು ರೂಪಿ­ಸು­ತ್ತಿದ್ದ ಆರೋಪದ ಮೇಲೆ ಮರಣ­ದಂಡನೆ  ಜಾರಿಗೊಳಿಸಲಾಗಿದೆ.

ಹಲವು ವರ್ಷಗಳ ನಂತರ ರಾಜ­ಕುಟುಂಬದ ಸದಸ್ಯರೊಬ್ಬರಿಗೆ ಮರಣ­ದಂಡನೆ ವಿಧಿಸಲಾಗಿದೆ.ಸೊಂಗ್‌­ಥೇಕ್‌ಗೆ ತಪ್ಪಿತಸ್ಥ ಎಂದು ವಿಶೇಷ ಸೇನಾ ನ್ಯಾಯಾಲಯ ಗುರುವಾರ ಘೋಷಿಸಿದ ನಂತರ ಮರಣದಂಡನೆ ಕಾಯಂಗೊಳಿಸಲಾಯಿತು.

ಸೊಂಗ್‌ಥೇಕ್‌ ವಿಶ್ವಾಸಘಾತುಕ ಹಾಗೂ ನಾಯಿಗಿಂತ ಕಡೆ. ಅಧಿಕಾರ ದಾಹದಿಂದ ಆತ ಬುದ್ಧಿಶಕ್ತಿ ಕಳೆ­ದು­ಕೊಂಡಿದ್ದ ಎಂದು ಸರ್ಕಾರಿ ಒಡೆ­ತನದ ಕೊರಿಯಾ  ಸುದ್ದಿಸಂಸ್ಥೆ ಹೇಳಿದೆ.

ಸೇನೆಯನ್ನು ಸಂಘಟಿಸಿಕೊಂಡು ದೇಶದ ಅಧಿಕಾರ ಪಡೆದುಕೊಳ್ಳಲು ಸಂಚು ರೂಪಿಸುತ್ತಿದ್ದ ಎಂದು ಆರೋಪಿ­ಸಲಾಗಿದೆ.
ಉ. ಕೊರಿಯಾದಲ್ಲಿ ಅಪರಾಧಿ­ಗಳನ್ನು ಗುಂಡಿಕ್ಕಿ ಸಾಯಿಸಲಾಗುತ್ತದೆ. ಆದರೆ ಸೊಂಗ್‌ಥೇಕ್‌ನನ್ನು ಯಾವ ರೀತಿ ಸಾಯಿಸಲಾಗಿದೆ ಎಂಬುದನ್ನು ಸುದ್ದಿಸಂಸ್ಥೆ ಬಹಿರಂಗಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT