ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉ. ಪ್ರದೇಶ ಎದುರು ತವರಿನಲ್ಲಿ ಮೊದಲ ಜಯ

Last Updated 11 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಮತ್ತು ಉತ್ತರ ಪ್ರದೇಶ ತಂಡಗಳು ರಣಜಿಯಲ್ಲಿ ಒಟ್ಟು 9 ಸಲ ಮುಖಾಮುಖಿಯಾಗಿದ್ದರೂ, ರಾಜ್ಯ  ತಂಡ ತವರು ನೆಲದಲ್ಲಿ ಒಂದೂ ಗೆಲುವು ಪಡೆದಿರಲಿಲ್ಲ. ಶನಿವಾರ ಈ ಸಾಧನೆ ಸಾಧ್ಯವಾಯಿತು.

ಕರ್ನಾಟಕ 1977–78 (ಮೋಹನ್‌ ನಗರ), 2006–07 (ಕಾನ್ಪುರ) ಮತ್ತು 2009–10 (ಮೀರತ್‌) ನಡೆದ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆದರೆ, ಕರ್ನಾಟಕದಲ್ಲಿ ಉಭಯ ತಂಡಗಳು ನಾಲ್ಕು ಸಲ ಮುಖಾಮುಖಿಯಾಗಿದ್ದರೂ, ಆತಿಥೇಯರು ಒಮ್ಮೆಯೂ ಜಯ ಸಾಧಿಸಿರಲಿಲ್ಲ. ಆದರೆ, ಈ ಸಲ ಒಂದೂವರೆ ದಿನದ ಆಟ ಬಾಕಿ ಇರುವಾಗಲೇ ಜಯಭೇರಿ ಮೊಳಗಿಸಿತು.

ವಿನಯ್‌ ಜಯದ ಓಟ: ವಿನಯ್‌ ಕುಮಾರ್‌ ತಂಡವನ್ನು ಮುನ್ನಡೆಸಿದಾಗ ಕರ್ನಾಟಕ ಹೆಚ್ಚು ಬಾರಿ ಗೆಲುವು ಸಾಧಿಸಿದೆ. ಒಟ್ಟು 20 ಪಂದ್ಯಗಳಿಗೆ ಅವರು ನಾಯಕರಾಗಿದ್ದರು. ಇದರಲ್ಲಿ ತಂಡ 8 ಸಲ ಜಯ ಸಾಧಿಸಿದರೆ, 10 ಪಂದ್ಯಗಳು ಡ್ರಾ ಆಗಿವೆ. 2013–14ರ ಋತುವಿನಲ್ಲಿ ವಿನಯ್‌ ಆರು ಪಂದ್ಯಗಳಿಗೆ ತಂಡವನ್ನು ಮುನ್ನಡೆಸಿದ್ದಾರೆ. ಅದರಲ್ಲಿ ನಾಲ್ಕು ಗೆಲುವು ಲಭಿಸಿದ್ದು, ಎರಡು ಪಂದ್ಯಗಳು ಡ್ರಾ ಆಗಿವೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿನಯ್‌ ಅವರನ್ನು ಪ್ರಶ್ನಿಸಿದಾಗ ‘ಯಾರು ನಾಯಕರಾದರೇನು ತಂಡದ ಹಿತಕ್ಕಾಗಿ ಆಡುವುದು ಮುಖ್ಯ. ಒಂದು ತಂಡವಾಗಿ ಆಡಿದರೆ, ಯಶಸ್ಸು ಖಂಡಿತವಾಗಿಯೂ ಒಲಿಯಲಿದೆ’ ಎಂದು ಉತ್ತರಿಸಿದರು.

ಗೆಲುವಿನಲ್ಲೂ ದಾಖಲೆ
ಕರ್ನಾಟಕ ತಂಡ ಸತತ ಆರು ಪಂದ್ಯಗಳಲ್ಲಿ ಗೆಲುವು ಪಡೆಯುವ ಮೂಲಕ ಹೊಸ ದಾಖಲೆಯೊಂದನ್ನು ಮಾಡಿತು.

1959–60ರಲ್ಲಿ ಮತ್ತು 1998–99ರಲ್ಲಿ ಸತತ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಇದುವರೆಗಿನ ಸಾಧನೆಯಾಗಿತ್ತು. ಉತ್ತರ ಪ್ರದೇಶದ ವಿರುದ್ಧ ಗೆಲುವು ಸಾಧಿಸುವ ಮೂಲಕ ಆತಿಥೇಯರು ಸತತ ಆರು ಪಂದ್ಯಗಳಲ್ಲಿ ಜಯ ಪಡೆದ ಸಾಧನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT