ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಂಗುರದ ವಜ್ರ ನುಂಗಿದ ನಾಯಿ!

Last Updated 7 ಜನವರಿ 2014, 19:30 IST
ಅಕ್ಷರ ಗಾತ್ರ

ಲಂಡನ್‌(ಪಿಟಿಐ): ಇದು ಪ್ರೀತಿಯ ನಾಯಿಯೊಂದು ಉಂಗುರದ ಬೆಲೆಬಾಳುವ ವಜ್ರದ ಹರಳು ನುಂಗಿ ತನ್ನ ಪಾಲಕರಿಗೆ ಪೀಕಲಾಟ ತಂದಿಟ್ಟ ಕತೆ ಇದು.

ತರಬೇತಿಯಲ್ಲಿರುವ ಪೊಲೀಸ್‌ ಶ್ವಾನಗಳ ಮೇಲ್ವಿಚಾರಣೆ ಮಾಡುತ್ತಿರುವ ಆ್ಯಂಜಿ ಕಾಲಿನ್ಸ್‌ ಅವರು ವಿವಾಹ ಸಂದರ್ಭದಲ್ಲಿ ಪತಿ ಗ್ರಾಹಾಂ ತೊಡಿಸಿದ 18,000 ಪೌಂಡ್‌ (ಅಂದಾಜು ₨18.36 ಲಕ್ಷ) ಮೌಲ್ಯದ ವಜ್ರದುಂಗರವನ್ನು ಉಗುರು ಅಂದಗೊಳಿಸುವುದಕ್ಕಾಗಿ ತೆಗೆದಿಟ್ಟಿದ್ದರು. ಆಗ ಅವರ ಪ್ರೀತಿಯ ನಾಯಿ ‘ಜಾಕ್’ ಉಂಗುರವನ್ನು ಕಡಿದು ವಜ್ರವನ್ನು ನುಂಗಿತ್ತು.

ಮನೆಯಲ್ಲೆಲ್ಲಾ ಹುಡುಕಿದ ದಂಪತಿಗೆ ವಜ್ರವು  ಎರಡು ದಿನಗಳ ತರುವಾಯ ನಾಯಿಯ ಮಲದಲ್ಲಿ ದೊರಕಿತು. ಈ ಎರಡು ದಿನಗಳು ಅವರು ಹೊಟ್ಟೆ­ಉಬ್ಬಿಸಿ­ಕೊಂಡಿದ್ದ ನಾಯಿಯ ಹಿಂದಿಂದೆಯೇ ತಿರುಗುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT