ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಉ.ಕ ಸಮಸ್ಯೆಗಳ ಚರ್ಚೆಗೆ ಅಧಿವೇಶನ ವೇದಿಕೆಯಾಗಲಿ'

Last Updated 5 ಡಿಸೆಂಬರ್ 2012, 7:59 IST
ಅಕ್ಷರ ಗಾತ್ರ

ಬೆಳಗಾವಿ: `ಸುವರ್ಣ ವಿಧಾನಸೌಧದಲ್ಲಿ ಬುಧವಾರ (ಡಿ.5)ದಿಂದ ಆರು ದಿನಗಳವರೆಗೆ ನಡೆಯುವ ಚಳಿಗಾಲದ ಅಧಿವೇಶನವು ಇಡೀ ರಾಜ್ಯಕ್ಕೆ ಅನ್ವಯಿಸುವ ವಿಷಯಗಳ ಜತೆಗೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೂ ವೇದಿಕೆ ಆಗಲಿ' ಎಂದು ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಹೇಳಿದರು.

ಮಂಗಳವಾರ ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು. ಬಳಿಕ ಮಾಧ್ಯಮ ಕೇಂದ್ರಕ್ಕೆ ಚಾಲನೆ ನೀಡಿದ ಅವರು ಸುದ್ದಿಗಾರರ ಜತೆ ಮಾತನಾಡಿದರು. ಈ ಅಧಿವೇಶನದಲ್ಲಿ ಸ್ಥಳೀಯ ಸಮಸ್ಯೆಗಳಿಗೂ ಆದ್ಯತೆ ಸಿಗಲಿ ಎಂದು ವಿವರಿಸಿದರು.

ಸುವರ್ಣ ವಿಧಾನಸೌಧದಲ್ಲಿ ಸಕಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಸಚಿವರಿಗೆ, ಶಾಸಕರಿಗೆ, ಅಧಿಕಾರಿಗಳಿಗೆ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ. ಎಲ್ಲ ವ್ಯವಸ್ಥೆಗಳನ್ನು ಸರಿಯಾದ ರೀತಿಯಲ್ಲಿ ಮಾಡುವ ನಿಟ್ಟಿನಲ್ಲಿ 12 ಸಮಿತಿಗಳನ್ನು ರಚಿಸಲಾಗಿದೆ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಹಾಗೂ ವಿಮಾನ ನಿಲ್ದಾಣದಲ್ಲಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು.

ಸಂಸದೀಯ ವ್ಯವಹಾರ ಹಾಗೂ ಕಾನೂನು ಸಚಿವ ಎಸ್. ಸುರೇಶಕುಮಾರ್ ಅವರು ಕೂಡ ಮಧ್ಯಾಹ್ನ ನಂತರ ವಿಧಾನಸೌಧಕ್ಕೆ ಆಗಮಿಸಿ ದರು. ಅವರು ಕೂಡ ಸಿದ್ಧತೆಯನ್ನು ಪರಿಶೀಲಿ ಸಿದರು. ಅಧಿಕಾರಿಗಳ ಜತೆ ಔಪಚಾರಿಕವಾಗಿ ಚರ್ಚೆ ನಡೆಸಿದರು.
ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್, ವಿಧಾನಸಭೆ ಕಾರ್ಯದರ್ಶಿ ಓಂಪ್ರಕಾಶ್, ಬೆಳಗಾವಿ ಪಾಲಿಕೆ ಆಯುಕ್ತ ಪ್ರಿಯಾಂಕಾ ಫ್ರಾನ್ಸಿಸ್ ಈ ಸಂದರ್ಭದಲ್ಲಿ ಹಾಜರಿದ್ದರು.

ಬಿಗಿ ಬಂದೋಬಸ್ತ್: ಅಧಿವೇಶನದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ವ್ಯಾಪಕ ಬಂದೋ ಬಸ್ತ್ ಮಾಡಲಾಗಿದೆ. ನಾಲ್ಕು ಸಾವಿರ ಪೊಲೀಸರನ್ನು ಭದ್ರತೆ ಸಲುವಾಗಿ ನಿಯೋಜಿಸಲಾಗಿದೆ.

5 ಎಎಸ್‌ಪಿ, 20 ಡಿಎಸ್‌ಪಿ,  59 ಪಿಐ, 152 ಪಿಎಸ್‌ಐ, 268 ಎಎಸ್‌ಐ, 2,683 ಪೊಲೀಸ್ ಸಿಬ್ಬಂದಿ, 25 ಕೆಎಸ್‌ಆರ್‌ಪಿ ತುಕಡಿಗಳು, 22 ಡಿಎಆರ್ ತುಕಡಿಗಳನ್ನು ಮತ್ತು ಒಂದು ಆರ್‌ಎಎಫ್ ತುಕಡಿಯನ್ನು ನಿಯೋಜಿಸಲಾಗಿದೆ. ಸೂಕ್ಷ್ಮ  ಸ್ಥಳಗಳಲ್ಲಿ 200 ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. 16 ಶ್ವಾನ ದಳ ಮತ್ತು 16 ಬಾಂಬ್ ನಿಷ್ಕ್ರೀಯ ದಳಗಳು ಸದಾ ಸನ್ನದ್ಧವಾಗಿರುತ್ತವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ ತಿಳಿಸಿದರು.

ಪ್ರತಿಭಟನೆ ನಿಷೇಧ:  ಅಧಿವೇಶನ ನಡೆಯುವ ದಿನಗಳಂದು ಸುವರ್ಣಸೌಧ ಸುತ್ತಮುತ್ತ ಒಂದು ಕಿಲೋ ಮೀಟರ್ ಒಳಗೆ ಯಾವುದೇ ಸಂಘಟನೆಗಳ ಪ್ರತಿಭಟನೆಗೆ ಅವಕಾಶ  ನೀಡಿರುವುದಿಲ್ಲ. ಪ್ರತಿಭಟನಾಕಾರರಿಗಾಗಿ ಸೂಕ್ತ ಸ್ಥಳವನ್ನು ಪೊಲೀಸ್ ಇಲಾಖೆ ನಿಗದಿಪಡಿಸಿದ್ದು, ನಿಗದಿತ ಸ್ಥಳದಲ್ಲಿ ಶಾಂತ ರೀತಿಯಿಂದ ಪ್ರತಿಭಟನೆ ನಡೆಸಬಹುದು ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT