ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್ ಜನರಿಗೂ ಈಗ ಗೋವಾ ಇಷ್ಟದ ತಾಣ

Last Updated 20 ಜನವರಿ 2011, 19:30 IST
ಅಕ್ಷರ ಗಾತ್ರ

ಕೀವ್ (ಐಎಎನ್‌ಎಸ್): ರಜೆ ಸಿಕ್ಕಾಗ ಗೋವಾಕ್ಕೆ ಪ್ರವಾಸ ತೆರಳುವುದು ಎಲ್ಲರಿಗೂ ಇಷ್ಟ. ವಿದೇಶೀಯರಿಗೂ ಗೋವಾ ಇಷ್ಟದ ತಾಣವೇ. ಇದೀಗ ಪೂರ್ವ ಯೂರೋಪ್‌ನ ರಾಷ್ಟ್ರವಾದ ಉಕ್ರೇನ್ ಜನರಿಗೂ ಗೋವಾ ಮೆಚ್ಚಿನ ಸ್ಥಳವಾಗಿ ಮಾರ್ಪಟ್ಟಿದ್ದು ಅಲ್ಲಿಂದ ತಂಡೋಪತಂಡವಾಗಿ  ಜನ ಆಗಮಿಸುತ್ತಿದ್ದಾರೆ.

‘ಗೋವಾ ನಮ್ಮ ಕನಸಿನ ತಾಣ. ಉಕ್ರೇನ್‌ನ ಮಾಧ್ಯಮಗಳು ಮತ್ತು ಜನರಿಂದ ಗೋವಾದ ಬಗ್ಗೆ ಭಾರೀ ಪ್ರಚಾರ ಸಿಕ್ಕಿದ್ದು ಜನ ಗೋವಾಕ್ಕೆ ತೆರಳಲು ಹಾತೊರೆಯುತ್ತಿದ್ದಾರೆ’ ಎಂದು ಭಾರತದ ವೀಸಾ ಪಡೆಯಲು ಪ್ರಯತ್ನಿಸುತ್ತಿರುವ ತಾನ್ಯಾ ಜಿನೆವೆರಾ ಸುದ್ದಿಸಂಸ್ಥೆಗೆ ತಿಳಿಸಿದರು.

‘ಯಾರಿಗೇ ಆಗಲಿ ಪದೇ ಪದೇ ಥಾಯ್ ಬೀಚ್‌ಗೆ ಹೋಗುವುದು ಇಷ್ಟವಾಗದು. ಸ್ವಲ್ಪ ಬದಲಾವಣೆ ಬೇಕೇ ಬೇಕು’ ಎನ್ನುತ್ತಾರೆ ಅವರು.ಆರ್ಥಿಕವಾಗಿ ಹಿಂದುಳಿದಿದ್ದ ಉಕ್ರೇನ್ ಕಳೆದ ಕೆಲವು ವರ್ಷಗಳಲ್ಲಿ ಚೇತರಿಸಿಕೊಂಡಿತ್ತು.

ಈ ಹಿನ್ನೆಲೆಯಲ್ಲಿ ಜನ ಚಳಿಗಾಲದಲ್ಲಿ ಪ್ರವಾಸಿ ತಾಣಗಳಿಗೆ ಹೋಗಲು ಆರಂಭಿಸಿದ್ದು ಇದೀಗ ಗೋವಾದತ್ತ ದೃಷ್ಟಿ ಹಾಯಿಸಿದ್ದಾರೆ. ಇದಕ್ಕಾಗಿ ನೇರ ವಿಮಾನದ ಸೌಲಭ್ಯವನ್ನೂ ಕಲ್ಪಿಸಿಕೊಡಲಾಗಿದೆ.ಇಲ್ಲಿನ ಭಾರತೀಯ ರಾಯಭಾರ ಕಚೇರಿಯ ಮುಂದೆ ಪ್ರತೀ ದಿನ ವೀಸಾಕ್ಕಾಗಿ ಅರ್ಜಿ ಸಲ್ಲಿಸಲು ನೂರಾರು ಮಂದಿ ಸರತಿಯ ಸಾಲಲ್ಲಿ ನಿಂತಿರುವುದು ಕಂಡು ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT