ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರಿಂದ ಹಾನಿ: ಪರಿಹಾರಕ್ಕೆ ಆಗ್ರಹ

Last Updated 7 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಐಎಎನ್‌ಎಸ್):ಉಗ್ರರಿಂದ ತಮಗೆ ಉಂಟಾಗಿರುವ ಹಾನಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಆಫ್ಘಾನಿಸ್ತಾನದ ಗಡಿ ಪ್ರದೇಶದಲ್ಲಿ ವಾಸಿಸುತ್ತಿರುವ ಸಿಖ್ಖರು ಮನವಿ ಮಾಡಿದ್ದಾರೆ.

ಒರಾಜಾಯಿ ಪ್ರದೇಶದ ಮೇಲೆ ಉಗ್ರರು ನಡೆಸಿರುವ ದಾಳಿಯಿಂದ ಭಾರಿ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ಎಂದು ಆ ಪ್ರದೇಶದ ಸಿಖ್ಖರು ಹೇಳಿದ್ದಾರೆ.  ಅಲ್ಲಿ  ಸಿಖ್ಖರ ಸುಮಾರು 26 ಮನೆಗಳು,ಕೆಲವು ಕೈಗಾರಿಕೆಗಳು ಸೇರಿದಂತೆ 18 ವಾಣಿಜ್ಯ ಮಳಿಗೆಗಳನ್ನು   ಉಗ್ರರು  ಸುಟ್ಟು ಹಾಕಿದ್ದಾರೆ ಎಂದು  ಸಿಖ್ ಸಮುದಾಯದ  ಮುಖಂಡರು ತಿಳಿಸಿದ್ದಾರೆ.

ನೂರಾರು ಮಂದಿ ಸಿಖ್ಖರು ಈ ಪ್ರದೇಶವನ್ನು ತೊರೆದಿದ್ದು, ಈಚೆಗಷ್ಟೇ ವಾಪಸಾಗಿದ್ದಾರೆ. ಆದರೆ ಅವರ ಆಸ್ತಿಪಾಸ್ತಿ ಹಾನಿಗೊಂಡಿದ್ದು ಜೀವನ ನಡೆಸುವುದು ಕಷ್ಟವಾಗಿದೆ. ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಗಿದೆ. 

 ಈ ಬಗ್ಗೆ  ಪ್ರತಿಕ್ರಿಯೆ ನೀಡಿರುವ ಉಗ್ರರು ತಲೆಗಂದಾಯವನ್ನು ನೀಡಲು ಒಪ್ಪದ ಕಾರಣ ಅವರ ಮನೆಗಳನ್ನು ಸುಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT